ರಾಸು ವಾರಿಯರ್ಸ್ ಟಿಪಿಎಲ್ ಚಾಂಪಿಯನ್

rasu
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ 3ನೇ ಆವೃತ್ತಿಯ ಟೆಲಿವಿಷನ್ ಪ್ರಿಮೀಯರ್ ಲೀಗ್ (ಟಿಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ರಾಸು ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಬಯೋಟಾಪ್ ಸೇವಿಯರ್ಸ್ ವಿರುದ್ಧ 9 ವಿಕೆಟ್​ಗಳ ಅಂತರದಿಂದ ಜಯ ಗಳಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಬಯೋಟಾಪ್ ನಿಗದಿತ 12 ಓವರ್​ಗಳಲ್ಲಿ 3 ವಿಕೆಟ್​ಗೆ 98 ರನ್ ಗಳಿಸಿತ್ತು. ಇದಕ್ಕೆ ಉತ್ತರ ನೀಡಿದ ರಾಸು ವಾರಿಯರ್ಸ್ 8.2 ಓವರ್​ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.

ಮೊದಲ ಸೆಮಿಫೈನಲ್​ನಲ್ಲಿ ಎ ಗುಂಪಿನ ಅಗ್ರಸ್ಥಾನಿ ಭಜರಂಗಿ ಬಾಯ್್ಸ ವಿರುದ್ಧ ಬಯೋಟಾಪ್ ಲೈಫ್ ಸೇವಿಯರ್ಸ್ 6 ವಿಕೆಟ್​ಗಳಿಂದ ಜಯ ಗಳಿಸಿತ್ತು. ಇನ್ನೊಂದು ಸೆಮಿಫೈನಲ್​ನಲ್ಲಿ ಬಿ ಗುಂಪಿನ ಅಗ್ರಸ್ಥಾನಿ ರಾಸು ವಾರಿಯರ್ಸ್, ಇನ್​ಸೇನ್ ಕ್ರಿಕೆಟ್ ಅಕಾಡೆಮಿ ವಿರುದ್ಧ 16ರನ್​ಗಳಿಂದ ಗೆಲುವು ಸಾಧಿಸಿತ್ತು.

ಫೆ. 28ರಿಂದ ಆರಂಭಗೊಂಡ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.

ಸಂಕ್ಷಿಪ್ತ ಸ್ಕೋರ್:

ಬಯೋಟಾಪ್ ಲೈಫ್ ಸೇವಿಯರ್ಸ್: 3 ವಿಕೆಟ್​ಗೆ 98 (ನರೇಶ ಗಾಂಧಿ 22, ವಿಜಯ ಆರ್. 28, ರೇಣುಕ 28ಅ, ಶ್ರೀರಾಮ 15ಕ್ಕೆ 1, ಅಕ್ಷಿತ ಶೆಟ್ಟಿ 15ಕ್ಕೆ 1, ಭಜರಂಗಿ ರವಿ 17ಕ್ಕೆ 1). ರಾಸು ವಾರಿಯರ್ಸ್: 8.2 ಓವರ್​ಗಳಲ್ಲಿ 1 ವಿಕೆಟ್​ಗೆ 102 (ರಘು ಭಟ್ 18, ದಿಲೀಪ ಗೌಡ್ 43ಅ, ಕರಿಬಸವ ತಡಕಲ್ 29ಅ, ವಿಜಯ ಆರ್. 16ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net