ನಗರದ ರಸ್ತೆಗೆ ಶೀಘ್ರ ಡಾ.ವಿಷ್ಣುವರ್ಧನ್ ಹೆಸರು

CTD 19 VISHNU-w
Published on

ಚಿತ್ರದುರ್ಗ: ನಟ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ನಗರದ ಒಂದು ರಸ್ತೆಗೆ ನಾಮಕಾರಣ ಮಾಡಬೇಕೆಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.

ಕೋಟೆ ವಾಯು ವಿಹಾರಿಗಳ ಸಂಘ ಕೋಟೆ ಆವರಣದಲ್ಲಿ ಭಾನುವಾರ ಸಂಜೆ,ವಿಷ್ಣುವರ್ಧನ್ ಅವರ 72ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿಷ್ಣು ಅಭಿಯನದ ನಾಗರಹಾವು ಸಿನಿಮಾದಿಂದಾಗಿ ಕೋಟೆ ಪ್ರವಾಸಿಗರ ನೆಚ್ಚಿನ ತಾಣವಾಯಿತು.

ರಸ್ತೆಯೊಂದಕ್ಕೆ ವಿಷ್ಣುವರ್ಧನ್ ಹೆಸರಿಡುವ ವಿಷಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದೆ. ಸಾಮಾಜಿಕ ಹೋರಾಟ ಗಾ ರ ಸಾರ್ಥವಳ್ಳಿ ನಾರಾಯಣಸ್ವಾಮಿ ಅವರು,ನಗರಸಭೆಗೆ ಮನವಿ ಕೊಟ್ಟಿದ್ದಾರೆ. ಇದು ಬಹುಜನರ ಬೇಡಿಕೆ ಕೂಡ ಆಗಿದೆ. ಶೀಘ್ರದಲ್ಲೇ ನಗರದ ಜೋಗಿಮಟ್ಟಿ ರಸ್ತೆಯಿಂದ ಕರುವಿನಕಟ್ಟೆ ವೃತ್ತ ಸೇರುವ ರಸ್ತೆಗೆ ಡಾ.ವಿಷ್ಣುವರ್ಧನ್ ಹೆಸರಿಡಲು ಚಿಂತಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ವಿಷ್ಣುವರ್ಧನ್ ಅವರಿಗೆ ಚಿತ್ರದುರ್ಗ ಹಾಗೂ ಇಲ್ಲಿಯ ಜನರೆಂದರೆ ವಿಶೇಷ ಪ್ರೀತಿ ಇತ್ತು. ಇವತ್ತಿನ ಯುವ ನಟ,ನಟಿಯರೂ ಒಳಗೊಂಡಂತೆ ಎಲ್ಲರಿಗೂ ಅವರ ಬದುಕು ಮಾದರಿಯಾಗಿದೆ ಎಂದರು. ಶಿಕ್ಷಕ ಕಡ್ಲೆಗುದ್ದು ಡಾ.ಮಹೇಶ್,ರವಿ ಕೆ.ಅಂಬೇಕರ್,ದಯಾವತಿ ಪುತ್ತೂರ್ಕರ್,ರಾಮಜ್ಜ,ಸೋಮನಾಥ ಶೆಟ್ಟಿ,ಡಿ.ಮಹೇಶ್,ಎನ್.ಎಚ್.ಮಂಜುನಾಥ್, ಎಲ್.ಆರ್.ವೆಂಕಟೇಶ್,ಎಂ.ಆರ್.ಮಂಜುನಾಥ್,ವಸಂತಲಕ್ಷ್ಮೀ,ಮಂಜುಳಾ ಮತ್ತಿತರರು ಇದ್ದರು. ನಂತರ ಗಾಯಕರಾದ ಕರಡಿಸಿದ್ದಾಪುರದ ನಾಗಭೂಷಣ,ಮಂಜುಳಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net