ರಾಷ್ಟ್ರೋತ್ಥಾನ ಪರಿಷತ್‌ನಿಂದ ಭಾಷಣ ಸ್ಫರ್ಧೆ ಕುಂದಾಪುರ ವಿದ್ಯಾರ್ಥಿನಿ ಪ್ರಥಮ

1_ASHIKA
Published on

ಬೆಂಗಳೂರು : ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಕುಂದಾಪುರದ ವಿದ್ಯಾರ್ಥಿನಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಕುಂದಾಪುರದ ಸಿದ್ಧಾಪುರ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಶಿಕಾ ಪ್ರಥಮ ಬಹುಮಾನ. ದ್ವಿತೀಯ ಬಹುಮಾನ ಕಾರ್ಕಳದ ಹೆಬ್ರಿ ಪಿಆರ್‌ಎನ್ ಅಮೃತ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ಮೇಧಾ ಉಡುಪ ಹಾಗೂ 3ನೇ ಬಹುಮಾನ ಬೆಂಗಳೂರಿನ ವೆಂಕಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ಮಾನಸಿ ಭಾಜನರಾಗಿದ್ದಾರೆ.

ರಾಜ್ಸೋತ್ಸವ ಪ್ರಯುಕ್ತ ‘ನನ್ನ ಹೆಮ್ಮೆಯ ಕರ್ನಾಟಕ’ ಎಂಬ ವಿಷಯ ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ 5 ದೇಶಗಳು, ಭಾರತದ 6 ರಾಜ್ಯಗಳು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಿಂದ 2210 ಶಾಲಾ ವಿದ್ಯಾರ್ಥಿಗಳು ತಮ್ಮ ಭಾಷಣವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net