

ಹುಲಸೂರು: ಗರ್ಭಿಣಿಯರು ಸಕಾಲಕ್ಕೆ ಊಟ, ನಿದ್ರೆ,ಯೋಗದ ಜತೆಗೆ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮಗುವಿನ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಹೇಳಿದರು.
ತಾಲೂಕಿನ ತೊಗಲೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ರಾಷ್ಟ್ರೀಯ ಪೋಷಣ್ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಣಂತಿಯರು ಹಾಗೂ ಗರ್ಭಿಣಿಯರು ಸೊಪ್ಪು, ಹಣ್ಣು, ತರಕಾರಿ, ಮೊಟ್ಟೆ, ಹಾಲು ಸ್ಥಳೀಯವಾಗಿ ದೊರಕುವ ಆಹಾರವನ್ನು ಸೇವನೆ ಮಾಡುವುದರಿಂದ ಹಲವಾರು ರೋಗಗಳನ್ನು ದೂರವಿಡಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಧಬಾಲೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಲೋಹಿತ ಜಮಾದಾರ, ಪ್ರಮುಖರಾದ ರಮೇಶ ಧಬಾಲೆ, ರವೀಂದ್ರ ಕಾಮಣ್ಣ, ಅಂಗನವಾಡಿ ಕಾರ್ಯಕರ್ತೆಯರಾದ ಅಂಬಿಕಾ, ಪುಷ್ಪಾ ಲದ್ದೆ, ಜಗದೇವಿ, ಕಲ್ಪನಾ ಗೌರಮ್ಮ, ಪ್ರೇಮಾ, ಸಹಾಯಕಿಯರಾದ ಲಕ್ಷ್ಮೀ, ಕಮಲಾಬಾಯಿ ಇತರರಿದ್ದರು.
ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನ ಪ್ರಾಶನ, ಅಕ್ಷರ ಅಭ್ಯಾಸ ಮಾಡಿಸಲಾಯಿತು. ಸಂಗೀತಾ ಸ್ವಾಗತಿಸಿ ನಿರೂಪಣೆ ಮಾಡಿದರು.