

ರಾಮದುರ್ಗ: ಮಹಾತ್ಮ ಗಾಂಧಿ ಅವರ ಸತ್ಯ, ಅಹಿಂಸೆ ತತ್ತ್ವಗಳು ಹಾಗೂ ಲಾಲಬಹಾದೂರ್ ಶಾಸಿ ಅವರ ಸರಳತೆ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ, ಲಾಲ್‌ಬದಾದೂರ್ ಶಾಸಿ ಜನ್ಮದಿನಾಚರಣೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದಂತಿವೆ ಎಂದರು. ತಹಸೀಲ್ದಾರ್ ಗಿರೀಶ ಸ್ವಾದಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ ತಂಗೊಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸ್.ಕರ್ಕಿ, ಶಿವು ಗೊರವನಕೊಳ್ಳ, ದಾಸರ, ಮಹೇಶ ತೆಂಗಿನಕಾಯಿ, ಶಿವು ಮತ್ತಿತರರು ಇದ್ದರು.