ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ಸ್ ಕ್ರೀಡಾಕೂಟ: ಭಾರ ಎತ್ತುವ ಸ್ಪರ್ಧೆಯಲ್ಲಿ ಹೊಸಪೇಟೆಯ ಸುಲ್ತಾನ್ ಬಾಬಾಗೆ ಬೆಳ್ಳಿ ಪದಕ

12 RMN-MGD p1
Published on

ಮಾಗಡಿ: ಗುಜರಾತ್‌ನ ವಡೋದರಾದಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ಸ್ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಪಟ್ಟಣದ ಹೊಸಪೇಟೆಯ ಸುಲ್ತಾನ್ ಬಾಬಾ ಬೆಳ್ಳಿ ಪದಕ ಪಡೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನ.5ರಿಂದ 15ರವರೆಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ 12ನೇ ಪ್ಯಾನ್ ಪೆಸಿಫಿಕ್ ಗೋಲ್ಡ್‌ಕಾಸ್ಟ್ ಮಾಸ್ಟರ್ ಗೇಮ್ಸ್ ಕ್ರೀಡಾಕೂಟದಲ್ಲಿ ದೇಶ ಪ್ರತಿನಿಧಿಸಲಿದ್ದಾರೆ.

ರೇಷ್ಮೆ ಇಲಾಖೆ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಲ್ತಾನ್ ಬಾಬಾ, ಚಿಕ್ಕಂದಿನಿಂದಲೇ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದರು. ಕಡು ಬಡತನದಲ್ಲೇ ಬೆಳೆದ ಸುಲ್ತಾನ್ ಬಾಬಾ, ಭಾರತವನ್ನು ಪ್ರತಿನಿಧಿಸು ತ್ತಿರುವುದು ಸಂತೋಷ ತಂದಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮತ್ತು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್. ಬಸವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆ, ರಾಜ್ಯ ಸೇರಿ ಅಂತಾರಾಷ್ಟ್ರೀಯ ಮಟ್ಟದ ಭಾರ ಎತ್ತುವ ಮತ್ತು ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಕನಸು ನನ್ನದಾಗಿತ್ತು. ಅದೇ ರೀತಿ ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ಪ್ರೋತ್ಸಾಹ ಸಿಕ್ಕರೆ ಒಲಿಂಪಿಕ್‌ನಲ್ಲೂ ಭಾಗವಹಿಸುತ್ತೇನೆ. -ಸುಲ್ತಾನ್ ಬಾಬಾ, ಕ್ರೀಡಾಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net