ಯುವಜನ ಮೇಳ, ತರಬೇತಿ ಶಿಬಿರ ಮುಂದುವರೆಸಲಿ: ರಾಷ್ಟ್ರ ಯುವಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಆಗ್ರಹ

Rashtra Yuva Awardee Press Conference Mandya
Published on

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯುವ ಜನರಿಗಾಗಿ ನಡೆಸುತ್ತಿದ್ದ ಯುವಜನ ಮೇಳ, ಯುವ ತರಬೇತಿ ಶಿಬಿರ ಹಾಗೂ ಯುವ ಸಂಪರ್ಕ ಸಭೆಗಳನ್ನು ಸರ್ಕಾರ ನಿಲ್ಲಿಸಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಪುನರ್ ಆರಂಭಿಸಬೇಕೆಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಒತ್ತಾಯಿಸಿದರು.

ಕಳೆದ ಐದು ವರ್ಷದಿಂದ ಕಾರ್ಯಕ್ರಮ ನಿಲ್ಲಿಸಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಯುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಯುವ ಸಬಲೀಕರಣ ಕ್ರೀಡಾ ಇಲಾಖೆ ಆರಂಭವಾದಾಗಿನಿಂದಲೂ ಯುವ ಸಂಪರ್ಕ ಸಭೆ, ಯುವ ಚೇತನ, ಯುವ ಪ್ರೇರಣ ಮತ್ತು ಯುವ ಸಂವಹನ ಎಂಬ ವಿಶಿಷ್ಟ ಕಾಯಾಗಾರ ನಡೆಯುತ್ತಿದ್ದವು. ಇದರಿಂದಾಗಿ ಯುವ ಜನರು ಪ್ರೇರಿತರಾಗಿ ಗ್ರಾಮದ ಅಭಿವೃದ್ಧಿಯ ಜತೆಗೆ ಸಾಂಸ್ಕೃತಿಕ ಹಾಗೂ ನೈತಿಕವಾಗಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದ್ದವು. ಈ ಎಲ್ಲ ಕಾರ್ಯಕ್ರಮವನ್ನು ಸರ್ಕಾರ ಸ್ಥಗಿತಗೊಳಿಸಿರುವುದು ಯುವಜನರ ಬಗೆಗಿನ ಅಸಡ್ಡೆ ತೋರುತ್ತದೆ. ಕಲೆ, ಸಂಸ್ಕೃತಿ ಮತ್ತು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನರು ಸರ್ಕಾರದ ನಿರ್ಲಕ್ಷೃತನದಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್.ಅನುಪಮಾ, ಕೆ.ಜೆ.ಸುರೇಶ್, ಹನಿಯಂಬಾಡಿ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net