

ಉಡುಪಿ: ಅಧ್ಯಯನಶೀಲತೆ ಕರಾವಳಿಯ ಅಸ್ಮಿತೆಯಾಗಿದೆ. ಗೋವಿಂದ ಪೈಗಳು ಸ್ವಾತಂತ್ರ$್ಯ ಪೂರ್ವದಲ್ಲಿಯೇ ಸಂಶೋಧನೆಗೆ ಆದ್ಯತೆ ನೀಡಿದ್ದರು. ಸಂಶೋಧನೆಯಿಂದ ಮನಸ್ಸು ಆಹ್ಲಾದಕರವಾಗುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಬಿ.ಎ ವಿವೇಕ್ ರೈ ಹೇಳಿದರು.
ಕನ್ನಡ ಮತ್ತು ಸಂಸತಿ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ನಡೆದ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಷೇಧಾತ್ಮಕ ವಿಷಯಗಳ ಚರ್ಚೆಯಲ್ಲಿ ಕಾಲಹರಣ ಮಾಡುತ್ತಾ, ಮೊಬೈಲ್ನಲ್ಲಿ ಬೇಡದ ವಿಡಿಯೋಗಳನ್ನು ಹಂಚುವ ಬದಲು ಯುವ ಜನತೆ ಸಂಶೋಧನೆಯತ್ತ ಆಸಕ್ತರಾದರೆ ಕರಾವಳಿಗೆ ಒಳ್ಳೆಯ ಹೆಸರು ಬರಲಿದೆ. ಜಿಲ್ಲೆಗೆ ಪಂಡಿತರ ಪರಂಪರೆಯೇ ಇದೆ. ತುಳುವ ಮತ್ತು ತುಳುವಂಶ ಕುರಿತ ಸಮಗ್ರ ಅಧ್ಯಯನ ಈವರೆಗೆ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಗೋವಿಂದ ಪೈ ಸಮಗ್ರ ಸಂಪುಟ ಯುವಪೀಳಿಗೆಗೆ ಪ್ರಚೋದನೆಯಾಗಲಿ ಎಂದರು.
ಪುಸ್ತಕ ಸಂಪಾದನೆ ಕ್ಲಿಷ್ಟಕರ
ಹಣದ ಮೋಹ ತ್ಯಜಿಸಿದಾಗ ಮಾತ್ರ ವಿದ್ವತ್ ಕೆಲಸ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಇಂಥ ವಿದ್ವಾಂಸರ ಅಗತ್ಯ ಬಹಳಷ್ಟಿದೆ. ಮೂಲ ಲೇಖಕರ ಭಾವನೆಗಳಿಗೆ ಧಕ್ಕೆಯಾಗದಂತೆ ವಿಷಯಗಳನ್ನು ಓದಿ ಗ್ರಹಣ ಮಾಡಿ, ಅರ್ಥ ಮಾಡಿಕೊಂಡು ಪುಸ್ತಕ ಸಂಪಾದನೆ ಕ್ಲಿಷ್ಟಕರ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ "ಗೋವಿಂದ ಪೈ ಸಂಶೋಧನ ಸಂಪುಟ" ಪರಿಸತ ದ್ವೀತಿಯ ಮುದ್ರಣ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಟಿ.ವಿ ಮೋಹನದಾಸ್ ಪೈ ಪ್ರಾಯೋಜಕತ್ವದ ವಿಮಲಾ ವಿ. ಪೈ ಸ್ಮರಣಾರ್ಥ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಮತ್ತು ಸಂಶೋಧಕ ನಾಡೋಜ ಡಾ.ಹಂ.ಪ. ನಾಗರಾಜಯ್ಯ ಅವರಿಗೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ ವೆಂಕಟೇಶ್, ಕಾಲೇಜಿನ ಪ್ರಾಂಶುಪಾಲ ಲಕ್ಷಿ$್ಮನಾರಾಯಣ ಕಾರಂತ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕೃತಿಯ ಸಂಪಾದಕ ಪ್ರೊ.ಮುರಳೀಧರ ಉಪಾಧ್ಯ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ ಉಪಸ್ಥಿತರಿದ್ದರು. ಮುಂಬಯಿ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ್ ಕುಮಾರ್ ಅಭಿನಂದನಾ ಭಾಷಣ ಮಾಡಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಆರ್ಆರ್ಸಿಯ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿದರು.