ರಶ್ಮಿ ಸಾಮಂತ್ ಖಾತೆ ಮರಳಿಸಿದ ಟ್ವಿಟರ್

Rasmhi sawanth
Published on

ಉಡುಪಿ: ಲಂಡನ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷೆ, ಉಡುಪಿ ಮೂಲದ ರಶ್ಮಿ ಸಾಮಂತ್ ಅವರ ಟ್ವಿಟರ್ ಖಾತೆಯನ್ನು 36 ಗಂಟೆಗಳ ಅಮಾನತಿನ ಬಳಿಕ ಮರಳಿ ನೀಡಲಾಗಿದೆ.

ರಶ್ಮಿ ಅವರು 13ರ ಹರೆಯದಲ್ಲಿ ಆರಂಭಿಸಿದ ಖಾತೆ ಇದಾಗಿದ್ದರಿಂದ ಈ ಕ್ರಮ ಎಂದು ಟ್ವಿಟರ್ ಕಾರಣ ನೀಡಿತ್ತು. ಟ್ವಿಟರ್ ನಿಯಮದ ಪ್ರಕಾರ ಅಪ್ರಾಪ್ತ ವಯಸ್ಸಿನಲ್ಲಿ ಮಾಡಿದ ಟ್ವೀಟ್‌ಗಳನ್ನು ತೆಗೆದುಹಾಕಿದರೆ ಖಾತೆ ಮುಂದುವರಿಸಬಹುದು. ರಶ್ಮಿ ಜನವರಿ ತಿಂಗಳಲ್ಲೇ ಹಳೆಯ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೂ ಖಾತೆಯನ್ನು ಅಮಾನತು ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಿಂದು ಪರವಾದ ಇನ್ನೊಂದು ಧ್ವನಿಯನ್ನು ಇಲ್ಲವಾಗಿಸುವ ಪ್ರಯತ್ನ ಎಂದು ಟೀಕೆ ವ್ಯಕ್ತವಾಗಿತ್ತು.

‘ಯಾವುದೇ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ನಾನು ಕಮೆಂಟ್ ಅಥವಾ ಟ್ವೀಟ್ ಮಾಡಿಲ್ಲ. ಆದರೂ ಖಾತೆ ಹೀಗೆ ಮಾಡಿರುವುದು ವಾಕ್ ಸ್ವಾತಂತ್ರೃಕ್ಕೆ ನೀಡಿದ ಹೊಡೆತ. ನನ್ನನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ’ ಎಂದು ರಶ್ಮಿ ಆರೋಪಿಸಿದ್ದರು. ಇದಾದ ಬಳಿಕ ಮಂಗಳವಾರ ರಾತ್ರಿ ಹೊತ್ತಿಗೆ ಅಮಾನತು ನಿರ್ಧಾರವನ್ನು ಟ್ವಿಟರ್ ವಾಪಸ್ ಪಡೆಯಿತು. ಆದರೆ ಫಾಲೋವರ್‌ಗಳನ್ನು ‘ಜೀರೋ’ ಮಾಡಿದೆ. ‘ಇದು ವಾಕ್ ಸ್ವಾತಂತ್ರೃವೇ?’ ಎಂದು ರಶ್ಮಿ ಟ್ವಿಟರ್‌ನಲ್ಲೇ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net