`ರಾಶಿಚಕ್ರ' ಹಾಸ್ಯ ರಂಗಪ್ರಯೋಗ ನಾಳೆ

63
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಡಾ. ಯಶವಂತ ಸರದೇಶಪಾಂಡೆ ಅವರ ಹಾಸ್ಯ ರಂಗ ಪ್ರಸ್ತುತಿ `ರಾಶಿಚಕ್ರ' ಹಾಸ್ಯ ರಂಗಪ್ರಯೋಗವನ್ನು ಹೊಸತನದೊಂದಿಗೆ ಡಿ. 8ರಂದು ಸಂಜೆ 6.45ಕ್ಕೆ ನಗರದ ಸೃಜನಾ ರಂಗಮ0ದಿರದಲ್ಲಿ ಆಯೋಜಿಸಲಾಗಿದೆ. ಇದೇವೇಳೆ ಡಾ. ಪವನ ಜೋಶಿ ಅವರ ಜೋಶಿಸ್ ಆಸ್ಟ್ರೋಸ್ಕೋಪ್ ಎಂಬ ಜೋತಿಷ್ಯಶಾಸ್ತ ಜಾಗೃತಿ ಕುರಿತಾದ ಯುಟ್ಯೂಬ್ ಚಾನೆಲ್‌ನ ಉದ್ಘಾಟನೆ ನೆರವೇರಲಿದೆ.

ಡಾ. ಸರದೇಶಪಾಂಡೆ ತಂಡ ರಂಗಭೂಮಿ ಇತಿಹಾಸದಲ್ಲಿ ಹೊಸ ಬಗೆಯ ಪ್ರಯತ್ನಗಳನ್ನುಮಾಡುತ್ತ ಬಂದಿದೆ. ಈ ಬಾರಿ ನಾಟಕ ನೋಡಲು ಬರುವ ಪ್ರೇಕ್ಷರರಿಗೆ ಬೆಣ್ಣೆ ದೋಸೆ ಮತ್ತು ಬಾದಾಮ ಹಾಲು ನೀಡುತ್ತಿದೆ. ಅಲ್ಲದೆ, 12 ಅದೃಷ್ಟವಂತ ಪ್ರೇಕ್ಷಕರಿಗೆ ಗಂಗಾವತಿ ಸಿಲ್ಕ್ ಪ್ಯಾಲೇಸ್ ವತಿಯಿಂದ ಸೀರೆ ನೀಡಲಾಗುತ್ತದೆ.

ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ, ನ್ಯಾಯ ಚೂಡಾಮಣಿ ಬ್ರಹ್ಮಶ್ರೀ ರಾಜೇಶ್ವರ ಶಾಸ್ತಿಗಳು, ಹುಬ್ಬಳ್ಳಿಯ ಶ್ರೀ ವ್ಯಾಸ ಶಂಕರ ಭಗವತ್ಪಾದ ಪ್ರತಿಷ್ಠಾನದ ಅಧ್ಯಕ್ಷ ವೇದಮೂರ್ತಿ ಶ್ರೀ ನಿತ್ಯಾನಂದ ದೇಸಾಯಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ನಿವೃತ್ತ ಕುಲಪತಿ ಕೆ.ಬಿ. ಗುಡಸಿ, ಗಂಗಾವತಿ ಸಿಲ್ಕ್ ಪ್ಯಾಲೇಸ್‌ನ ಆನಂದ ಕಮತಗಿ ಭಾಗವಹಿಸುವರು.

ರಾಜ್ಯದಲ್ಲಷ್ಟೆ ಅಲ್ಲದೆ ದೇಶ- ವಿದೇಶಗಳಲ್ಲೂ ರಾಶಿಚಕ್ರ ಹಾಸ್ಯ ರಂಗಪ್ರಯೋಗ ಜನಪ್ರಿಯವಾಗಿದೆ. ಜೋತಿಷ್ಯ ಶಾಸ್ತçದ ಕೆಲ ಸೂಕ್ತತೆಗಳನ್ನು ಆಯ್ದ 12 ರಾಶಿಗಳ ಕುರಿತು ನಟ, ನಿರ್ದೇಶಕ ಡಾ. ಸರದೇಶಪಾಂಡೆ ರಂಜನೀಯವಾಗಿ ಹೇಳುತ್ತಾರೆ. ರಾಶಿಚಕ್ರ ಎಂದರೆ ಕೇವಲ ಜೋತಿಷ್ಯಕ್ಕೆ ಸಂಬ೦ಧಿಸಿದ್ದು ಎಂಬ ಮಾತು ರಂಗಪ್ರಯೋಗವನ್ನು ನೋಡಿದಾಗ ಸುಳ್ಳೆನಿಸುತ್ತದೆ. ಎಲ್ಲ ವಯೋಮಿತಿಯವರು ಸಂಸಾರ ಸಮೇತ ನೋಡಿ ಉತ್ತೇಜಿಸಬೇಕು ಎಂದು ಡಾ. ಸರದೇಶಪಾಂಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net