ಮಲೇಶಿಯಾದಲ್ಲಿ ರಾಶಿಚಕ್ರ ಪ್ರದರ್ಶನ

IMG-20240827-WA0024_1.jpg
Published on

ಹುಬ್ಬಳ್ಳಿ: ಮಲೇಶಿಯಾದ "ನಾವು ನಮ್ಮ ಮಂದಿ' ತಂಡದವರು, ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ "ರಾಶಿಚಕ್ರ' ಕಾರ್ಯಕ್ರಮವನ್ನು ಮಲೇಶಿಯಾದ ಕೌಲಾಲಂಪುರದಲ್ಲಿ ಆಯೋಜಿಸಿದ್ದರು.

ಕನ್ನಡದ ಹೆಮ್ಮೆಯ ರಂಗಕಲಾವಿದ ಡಾ. ಯಶವಂತ ಸರದೇಶಪಾಂಡೆ ಅವರು ರಾಶಿಚಕ್ರ ರಂಗ ಪ್ರಯೋಗದ ಮೂಲಕ ನೋಡುಗರನ್ನು ನಕ್ಕುನಗಿಸಿದರು.

ಪ್ರತಿಯೊಂದು ರಾಶಿಯ ಸೂಕ್ಷ್ಮಪರಿಚಯ ಮಾಡಿಸುತ್ತ, ಆಯಾ ರಾಶಿಯ ಗುಣ ಅವಗುಣಗಳನ್ನು ಮಾರ್ಮಿಕವಾಗಿ ವರ್ಣಿಸಿದರು. ಹಾಸ್ಯದ ಲೇಪದೊಂದಿಗಿನ ಜ್ಯೋತಿಷ್ಯ ಪಾಠ ಮಜವಾಗಿತ್ತು. ಕುಟುಂಬ ಸಮೇತ ಆಗಮಿಸಿದ ಮಲೇಶಿಯಾ ಕನ್ನಡಿಗರು ರಂಗ ಪ್ರಯೋಗ ಆನಂದಿಸಿದರು.

ಮಲೇಶಿಯಾ ಸ್ಯಾಂಡಲ್ ವುಡ್ ಟಾಕೀಸ್ ತಂಡದ ನಾಗೇಂದ್ರ ಲೋಲಿ, ಸಕ್ರಿಯ ಕನ್ನಡಿಗ ಡಾ. ಸುಭಾಸ ಪಾಟೀಲ ಅವರ ವಿಶೇಷ ಸಹಯೋಗ, ಮಲೇಶಿಯಾ ಕನ್ನಡಿಗರ ಸಹಾಯದಿಂದ ಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಅಜಿತ ಹನುಮಕ್ಕನವರ ಅವರನ್ನು ಗೌರವಿಸಲಾಯಿತು. ಮಂಜುಳಾ ನಿಲುಗಲ್ ಅತಿಥಿಗಳನ್ನು ಪರಿಚಯಿಸಿದರು. ಕಿರಣ ರೋಣದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net