

ಮುಂಡಗೋಡ: ಮನೆ ಪಕ್ಕದಲ್ಲಿ ಒಣಗಿಸಲು ಹಾಕಿದ್ದ 9 ಕ್ವಿಂಟಾಲ್ನಷ್ಟು ರಾಶಿ ಅಡಕೆ ಬೆಟ್ಟಗಳನ್ನು ಕಳವು ಮಾಡಿದ ಘಟನೆ ತಾಲೂಕಿನ ಶಿಂಗ್ನಳ್ಳಿ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಜರುಗಿದೆ.
ಅಡಕೆ ವ್ಯಾಪಾರಸ್ಥ ಪ್ರಭು ಪಾಟೀಲ ಎಂಬುವವರಿಗೆ ಸೇರಿದ ಅಡಕೆ ರಾಶಿ ಕಳ್ಳತನವಾಗಿದೆ. ತೋಟಗಳಿಂದ ಅಡಕೆ ಖರೀದಿಸಿ ತಂದು ಅದನ್ನು ಸುಲಿದು ರಾಶಿ ಅಡಕೆ ಮಾಡಿ ಮನೆಯ ಅಕ್ಕಪಕ್ಕದಲ್ಲಿ ಒಣಗಲು ಹಾಕಿದ್ದರು. ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೆ ಮನೆ ಇರುವುದರಿಂದ ಕಳ್ಳರು ಭಾನುವಾರ ನಸುಕಿನಲ್ಲಿ 9 ಕ್ವಿಂಟಾಲ್ನಷ್ಟು ರಾಶಿ ಅಡಕೆ ಕಳವು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಪರಶುರಾಮ ಮಿರ್ಜಗಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.