ರಸಾಯನಿಕ ಮುಕ್ತದಿಂದ ಆರೋಗ್ಯಕ್ಕೆ ಶಕ್ತಿ

IMG-20250202-WA0016
Published on

ಸೇಡಂ: ದಿನ ಕಳೆದಂತೆ ಭಾರತದಲ್ಲಿ ಕೃಷಿ ಪದ್ಧತಿ ವಿಷಮಯಗೊಳ್ಳುತಿದ್ದು, ರಾಸಾಯಿನಕ ಮುಕ್ತ ಕೃಷಿ ಕೈಗೊಳ್ಳುವ ಮೂಲಕ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರದ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸೇಡಂ ಸಮೀಪದ ಬೀರನಹಳ್ಳಿ ಕ್ರಾಸ್‌ನ ಪಕೃತಿ ನಗರದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತೀಯ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಜಂಟಿಯಾಗಿ ಆಯೋಜಿಸಿ ಕೊತ್ತಲ ಸ್ವರ್ಣ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಆಹಾರ-ಆರೋಗ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿನ ಆಹಾರ ಪದ್ಧತಿ ಬದಲಾಗಬೇಕಾಗಿದೆ ಎಂದರು.

ಸಮಾಜ ಮುಖಿ, ದೇಶದ ಸಂಸ್ಕೃತಿ ಎತ್ತಿ ಹಿಡಿಯುವ ಇಂತಹ ಕೆಲಸ ಮಾಡುತ್ತಿರುವ ಕೆಲಸಕ್ಕೆ ರಾಜ್ಯವಾಳುತ್ತಿರುವ ಸರ್ಕಾರ ರಾಜಕೀಯ ಬಣ್ಣ ಬಳಿಯುತ್ತಿರುವದು ವಿಷಾದವಾಗಿದೆ. ಯಾವುದೇ ಜಾತಿ, ಧರ್ಮದ ವಿರುದ್ಧವಲ್ಲದ ಭಾರತೀಯ ಸಂಸ್ಕೃತಿ ಬಿತ್ತುವ ಕಾರ್ಯವನ್ನು ಪಕ್ಷಾತೀತವಾಗಿ ಸರ್ಕಾರವೆ ನಿಂತು ಮಾಡಬೇಕು. ಆದರೆ ಮಾಡುತ್ತಿರುವವರಿಗೂ ವಿರೋಧಿಸುವ ಭಾವನೆ ಎಷ್ಟರ ಮಟ್ಟಿಗೆ ಸರಿಯಾಗಿದೆ ಎನ್ನುವದು ಅರಿತುಕೊಳ್ಳಬೇಕು. ಇಂತಹ ಮನಸ್ಸುಗಳಿಗೆ ನಮ್ಮದೊಂದು ದಿಕ್ಕಾರವಿದೆ. ಹಿಂದೆ ನಮ್ಮನಾಳಿದ ಸರ್ಕಾಗಳು ಕೇವಲ ಎಂದು ತಿಳಿಸಿದರು.

ಮೈಸೂರಿನ ಆಹಾರ ಮತ್ತು ಸಿರಿಧಾನ್ಯ ತಜ್ಞ ಡಾ.ಖಾದರವಲಿ ಮಾತನಾಡಿ, ನಮ್ಮ ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪೌಷ್ಠಿಕಾಂಶದಿAದ ಕೂಡಿದ ಆರೋಗ್ಯಕರ ಜೀವನಕ್ಕೆ ಪೂರಕವಾಗುವ ೩೬ಆಹಾರ ಧಾನ್ಯಗಳಿವೆ. ಆದರೆ ನಾವೆಲ್ಲರು ಅದನ್ನು ಬಿಟ್ಟು ಅಕ್ಕಿ, ಗೋಧಿಯ ಹಿಂದೆ ಬಿದ್ದು ರೋಗಗ್ರಸ್ಥ ದೇಹವನ್ನಾಗಿಸಿಕೊಳ್ಳುತಿದ್ದೇವೆ ಎಂದರು.

ಅಧ್ಯಾತ್ಮ ಸಾಧಕಿ ಡಾ.ವೀಣಾ ಬನ್ನಂಜೆ ಮಾತನಾಡಿ, ಮಾನವನಲ್ಲಿ ಆದಿ ಮತ್ತು ವಾದಿ ಎನ್ನುವ ಎರಡು ಬಗೆಯ ರೋಗಗಳಿವೆ. ಮನಸ್ಸು ಚಂದವಾಗಿ ಇದ್ದಾಗ, ದೇಹದ ಆರೋಗ್ಯ ಉತ್ತಮವಾಗಿಸಬಹುದು. ಹೆಚ್ಚು ತಿನ್ನುವದು ಸಹ ರೋಗಕ್ಕೆ ಅಹ್ವಾನಿಸಿದಂತೆ. ತೂಕ ಹೆಚ್ಚಳಕ್ಕೆ ಕೇವಲ ಊಟವೊಂದೆ ಕಾರಣವಲ್ಲ. ಜೀವನದಲ್ಲಿ ಅತೀ ಸಂತದ ಕ್ಷಣವು ಅದರ ಭಾಗವಾಗಿದೆ ಎಂದು ಹೇಳಿದರು.

ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ, ಬೀದರನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಭಾರತೀಯ ವಿಕಾಸ ಸಂಗಮದ ಸಂಯೋಜಕ ಕೆ.ಎನ್.ಗೋವಿಂದಚಾರ್ಯ, ಗುಜರಾತನ ಗರ್ಭೋಷನಿಷದ್ ಫೌಂಡೇಶನ್ ಸಂಸ್ಥಾಪಕ ಡಾ.ಹಿತೇಶ್ ಜಾನಿ, ಚಿರಾಯು ಆಸ್ಪತ್ರೆಯ ಡಾ.ಮಂಜುನಾಥ ಧೂಶೆಟ್ಟಿ, ಗದಗನ ಪಾರಂಪರಿಕ ವೈದ್ಯ ಡಾ.ಹನುಮಂತ ಮಳಲಿ, ಮಾಜಿ ಸೈನಿಕ ಮುರಳಿಕಾಂತ ಪೇಟಕರ್ ಇದ್ದರು.

ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ಅನುರಾಧ ಪಾಟೀಲ್ ಸ್ವಾಗತಿಸಿದರು. ಉಪನ್ಯಾಸಕ ಜಗದೀಶ ಕಡಬಗಾಂವ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net