

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಸಂರ್ಪೂಣ ಸಸ್ಯಾಹಾರಿ ರೆಸ್ಟೋರೆಂಟ್ "ರಾರಸ್'ಗೆ ದೆಹಲಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ಲೋಬಲ್ ಕ್ಯುಸಿನ್ ರೆಸ್ಟೋರೆಂಟ್ ಪ್ರಶಸ್ತಿ ನೀಡಲಾಗಿದೆ.
ರೆಸ್ಟೋರೆಂಟ್ ಆಫ್ ದಿ ಇಯರ್ ಅವಾರ್ಡ್ 2024ರ ಕಾರ್ಯಕ್ರಮದಲ್ಲಿ ರಾರಸ್ ಸಹ-ಸಂಸ್ಥಾಪಕ ವಿಜಯ್ ಮಾನೆ ಅವರಿಗೆ ಸೆಲೆಬ್ರಿಟಿ ಚೆಫ್ ಸಂಜೀವ ಕಪೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನೋಯ್ಡಾದ "ಮೆರಿಟ್ ಅವಾರ್ಡ್ಸ್ - ಮಾರ್ಕೆಟ್ ರೀಸರ್ಚ್' ಸಂಸ್ಥೆಯು ಭಾರತದಲ್ಲಿನ ರೆಸ್ಟೋರೆಂಟ್ಗಳ ಗುಣಮಟ್ಟ ಆಧರಿಸಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡುತ್ತಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯ ಮಾನೆ ಅವರು, ರಾರಸ್ ತಂಡವು ಕಳೆದ 3 ವರ್ಷಗಳಿಂದ ಮಾಡಿದ ಪ್ರಯತ್ನಗಳಿಗೆ ಸಂದ ಗೌರವ ಇದಾಗಿದೆ. ಒಂದೇ ರೀತಿಯ ಆಹಾರ ತಿನ್ನುವ ಬೇಸರವನ್ನು ಹೋಗಲಾಡಿಸಲು ರಾರಸ್ ಹುಟ್ಟಿದೆ ಎಂದರು.
ಸಹ-ಸಂಸ್ಥಾಪಕರಾದ ಪ್ರಸಾದ ಪಾಟೀಲ, ಶ್ರವಣ ಕೆಮ್ತೂರ ಮತ್ತು ಪ್ರಕಾಶ ಬದ್ದಿ ಅವರೊಂದಿಗೆ ನಾನು ಆಫ್ ಬೀಟ್ ರೆಸ್ಟೋರೆಂಟ್ ಪರಿಕಲ್ಪನೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದ್ದೇನೆ. ನಗರದ ಇತರ ಯಾವುದೇ ರೆಸ್ಟೋರೆಂಟ್ಗಳಲ್ಲಿ ಸಾಮಾನ್ಯವಾಗಿ ಲಭ್ಯವಿರದ ಭಕ್ಷ್ಯಗಳನ್ನು ನಾವು ಬಡಿಸಬೇಕು ಎಂಬುದು ಉದ್ದೇಶ. ಅದರಂತೆ ಉದ್ಯಮಕ್ಕೆ ರಾರಸ್ ಎಂದು ಹೆಸರಿಸಲಾಯಿತು ಎಂದರು.
ಪ್ರಾರಂಭವಾದ 16 ತಿಂಗಳಲ್ಲಿ ಸಾವಿರಾರು ಅತಿಥಿಗಳಿಗೆ ಸೇವೆ ಸಲ್ಲಿಸಿದೆ. ಗ್ರಾಹಕ ತೃಪ್ತಿ ಸೂಚ್ಯಂಕವು 99.5 ಅಧಿಕ ಮತ್ತು ಗ್ರಾಹಕರ ಪುನರಾವತಿರ್ತ ಅನುಪಾತವು ಉದ್ಯಮದಲ್ಲಿಯೇ ಅತ್ಯಧಿಕವಾಗಿದೆ ಎಂದರು.