ಎಸ್‌ಡಿಎಂ ಆಸ್ಪತ್ರೆಯಲ್ಲಿ ವಿರಳ ಚಿಕಿತ್ಸೆ ಯಶಸ್ವಿ

web 1
Published on

ಧಾರವಾಡ: ಹೆರಿಗೆಯ ನಂತರ ರಕ್ತದ ನಂಜು ಮತ್ತು ಉಸಿರಾಟದ ತೊಂದರೆಯಿAದ ಬಳಲುತ್ತಿದ್ದ ಮಹಿಳೆಗೆ ನಗರದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರ ತಂಡ ವಿರಳ ಚಿಕಿತ್ಸೆ ನೀಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಗದಗ ಖಾಸಗಿ ಆಸ್ಪತ್ರೆಯಲ್ಲಿ ೩೯ ವರ್ಷ ವಯಸ್ಸಿನ ಮಹಿಳೆಗೆ ಹೆರಿಗೆಯಾಗಿತ್ತು. ರಕ್ತದ ನಂಜು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡು ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಪ್ರೋನ್ ಮತ್ತು ಕೃತಕ ಉಸಿರಾಟ ವಿಫಲವಾದ ನಂತರ ಎಕ್ಮೋ ಚಿಕಿತ್ಸೆಯ ಅಗತ್ಯವಿತ್ತು. ಈ ಸ್ಥಿತಿಯಲ್ಲಿ ಎಸ್‌ಡಿಎಂ ಕ್ರಿಟಿಕಲ್ ಕೇರ್ ಮೆಡಿಸಿನ್ (ಸಿಸಿಎಂ) ವಿಭಾಗಕ್ಕೆ ಮಾಹಿತಿ ಬಂದಾಗ ಮಹಿಳೆಯನ್ನು ಗದಗದಿಂದ ಧಾರವಾಡಕ್ಕೆ ಸ್ಥಳಾಂತರಿಸುವುದು ಅಪಾಯಕಾರಿಯಾಗಿತ್ತು. ಸಿಸಿಎಂ ವಿಭಾಗದ ಮೂವರು ವೈದ್ಯರು, ಎಕ್ಮೋ ತಂಡ ಸುಧಾರಿತ ಕಾರ್ಡಿಯಾಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಮೂಲಕ ಗದಗಕ್ಕೆ ತೆರಳಿ ವಿವಿ ಎಕ್ಮೋ ಚಿಕಿತ್ಸೆ ಆರಂಭಿಸಿತು. ನಂತರ ಮಹಿಳೆಯನ್ನು ಹೈಟೆಕ್ ಆ್ಯಂಬುಲೆನ್ಸ್ನಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರಿಸಲಾಯಿತು.
ತೀವ್ರ ನಿಗಾ ಘಟಕದಲ್ಲಿ ಎಕ್ಮೋ ಚಿಕಿತ್ಸೆ ಮುಂದುವರಿಸಿ ಭೌತಿಕ ಚಿಕಿತ್ಸೆ ನೀಡಲಾಯಿತು. ಶ್ವಾಸಕೋಶದ ನ್ಯೂಮೋನಿಯಾದಲ್ಲಿ ಸುಧಾರಣೆ ಕಂಡುಬAದಿತು. 10ನೇ ದಿನ ಕೃತಕ ಉಸಿರಾಟ ವ್ಯವಸ್ಥೆಯಿಂದ ಬಿಡುಗಡೆಗೊಳಿಸಿ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net