

ಯಲ್ಲಾಪುರ: ತಾಲೂಕಿನ ಬಿಸಗೋಡ ಭಾಗದಲ್ಲಿ ಅಪರೂಪದ ಹಾವಿನ ಪ್ರಬೇಧವೊಂದು ಪತ್ತೆಯಾಗಿದೆ. ಎನಿಮಲ್ ವೆಲ್ ಫೇರ್ ಆಂಡ್ ರಿಸರ್ಚ್ ಫೌಂಡೇಷನ್ನ ಅಧ್ಯಕ್ಷ ದತ್ತಾತ್ರೇಯ ಮುರ್ಕಡೆ ಹಾಗೂ ಅಕ್ಬರ್ ಅಲಿ ಶೇಖ್ ಅವರಿಗೆ ಈ ಅಪರೂಪದ ಹಾವು ಕಂಡು ಬಂದಿದೆ.
ಸ್ಟ್ರಿಪೆಡ್ ಕೋರಲ್ ಸ್ನೇಕ್ ಎಂಬ ಪ್ರಬೇಧಕ್ಕೆ ಸೇರಿದ ಈ ಹಾವಿಗೆ ಕ್ಯಾಲಿಯೋಪಿಸ್ ನಿಗ್ರೆಸೆನ್ಸಸ್ ಎಂಬ ವೈಜ್ಞಾನಿಕ ಹೆಸರಿದೆ. ಈ ಜಾತಿಯಲ್ಲಿ 20-25 ಪ್ರಬೇಧಗಳನ್ನು ಗುರುತಿಸಲಾಗಿದೆ. ಆದರೆ ,ಇಲ್ಲಿ ಸಿಕ್ಕಿರುವುದು ಅವೆಲ್ಲಕ್ಕಿಂತ ಭಿನ್ನ ಮತ್ತು ಅಪರೂಪದ್ದಾಗಿದೆ. </p><p> ಹಾವಿನ ಮೇಲ್ಮೈ ಕಂದು ಬಣ್ಣದಲ್ಲಿದ್ದು, ಅಲ್ಲಲ್ಲಿ ಕಪ್ಪುಚುಕ್ಕೆಗಳಿವೆ. ಅಡಿಭಾಗ ಕೇಸರಿಮಯವಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿಯಾದ ಈ ಹಾವು ಕಚ್ಚಿದರೆ ಯಾವುದೇ ಚಿಕಿತ್ಸೆ, ಔಷಧಿ ಇಲ್ಲ.
ಈ ಪ್ರಬೇಧದ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದರೆ ಜನರಲ್ಲಿ ಜಾಗೃತಿ ಮೂಡಿಸಬಹುದು. ಸಂಶೋಧನೆಗೆ ಅರಣ್ಯ ಇಲಾಖೆಯ ಪೋ›ತ್ಸಾಹ, ಸಹಕಾರ ದೊರೆತರೆ ಇನ್ನಷ್ಟು ಮಾಹಿತಿ, ಅರಿವು ಪಡೆದುಕೊಳ್ಳಬಹುದೆಂದು ಎನಿಮಲ್ ವೆಲ್ ಫೇರ್ ಆಂಡ್ ರಿಸರ್ಚ್ ಫೌಂಡೇಷನ್ನ ಅಧ್ಯಕ್ಷ ದತ್ತಾತ್ರೇಯ ಮುರ್ಕಡೆ ಹೇಳಿದ್ದಾರೆ.