

ಮೊಳಕಾಲ್ಮೂರು: ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಗಾಂಧೀಜಿ, ದಕ್ಷ ಆಡಳಿತ ನಡೆಸಿದ ಶಾಸ್ತ್ರಿ ಅವರು ಅಪರೂಪದ ಕಣ್ಮಣಿಗಳು ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ.ರಂಗಪ್ಪ ಬಣ್ಣಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವತಂತ್ರ ಭಾರತಕ್ಕಾಗಿ ಅಹಿಂಸೆ, ಸತ್ಯಾಗ್ರಹ ನಡೆಸುವ ಮೂಲಕ ಬ್ರಿಟಿಷರ ಹುಟ್ಟಡಗಿಸಿದ ಗಾಂಧೀಜಿ ಅವರು ಭಾರತೀಯರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರು.
ಸರ್ವೇ ಇಲಾಖೆ ಅಧಿಕಾರಿ ರಾಜಶೇಖರ, ಶಿರಸ್ತೇದಾರ ಏಳುಕೋಟಿ, ಮಲ್ಲಿಕಾರ್ಜುನ, ರಂಗನಾಥ, ತಿಪ್ಪೇಸ್ವಾಮಿ, ಮಾರನಾಯಕ, ರಮೇಶ್, ಮಲ್ಲಮ್ಮ ಇತರರಿದ್ದರು.
ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು, ಪ್ರಗತಿಪರ ಸಂಘಟನೆಗಳ ಕಾರ್ಯ ಸೇರಿ ಎಲ್ಲೆಡೆ ಜಯಂತಿ ಆಚರಿಸಲಾಯಿತು.