ರಾರಾವಿ ಗ್ರಾಮದಲ್ಲಿ ಮದ್ಯದಂಗಡಿ ಮುಚ್ಚಿಸುವಂತೆ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಗ್ರಾಮಸ್ಥರ ಮನವಿ

Siriguppa Raravi Villagers Appeal to Close Liqure Shop
ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿರುವ ಮದ್ಯದಂಗಡಿ ಮುಚ್ಚುವಂತೆ ಒತ್ತಾಯಿಸಿ ರಾರಾವಿ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್ ವಿಶ್ವನಾಥರ ಮೂಲಕ ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Published on

ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದಲ್ಲಿರುವ ಮದ್ಯದಂಗಡಿ ಮುಚ್ಚುವಂತೆ ಒತ್ತಾಯಿಸಿ ರಾರಾವಿ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಸೋಮವಾರ ಮನವಿ ಸಲ್ಲಿಸಿದರು.

ಗ್ರಾಮಸ್ಥ ಯಲ್ಲಪ್ಪ ನಾಯಕ ಮಾತನಾಡಿ, ನಮ್ಮ ಗ್ರಾಮದಲ್ಲಿರುವ ಗೋಲ್ಡನ್ ವೈನ್‌ಶಾಪ್‌ಗೆ ನೆರೆಯ ಸೀಮಾಂಧ್ರ ಪ್ರದೇಶದ ಅನೇಕ ಹಳ್ಳಿಗಳಿಂದ ನೂರಾರು ಜನ ಚೆಕ್‌ಪೋಸ್ಟ್ ತಪ್ಪಿಸಿ ಅಡ್ಡದಾರಿಯಲ್ಲಿ ಬಂದು ಮದ್ಯ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಕೆಲವರು ಇಲ್ಲಿಯೇ ಕುಡಿದು ತೂರಾಡುತ್ತಾರೆ. ಇದರಿಂದ ಗ್ರಾಮದ ಮಹಿಳೆಯರಿಗೆ ಹೊಲಗಳಿಗೆ ತೆರಳಲು ಮುಜುಗರ ಎನಿಸುತ್ತಿದೆ. ಸೀಮಾಂಧ್ರ ಪ್ರದೇಶದ ಆದೋನಿ ತಾಲೂಕಿನಲ್ಲಿ ಕರೊನಾ ಕೇಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಇದೇ ತಾಲೂಕಿನ ಅನೇಕರು ನಿತ್ಯ ಇಲ್ಲಿಗೆ ಮದ್ಯ ಖರೀದಿಸಲು ಬರುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೂಡಲೇ ಮದ್ಯದಂಗಡಿಯನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಬೀರಪ್ಪ, ಸೋಮಯ್ಯ, ಯಲ್ಲಪ್ಪ, ಹುಸೇನಪ್ಪ, ಯಲ್ಲಪ್ಪ, ಸಿದ್ದಣ್ಣ, ಗಾದಿಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net