ಅತ್ಯಾಚಾರಿಗೆ ತಕ್ಷಣವೇ ಶಿಕ್ಷೆಯಾಗಲಿ

ಹೊಸಪೇಟೆಯ ತಹಸಿಲ್ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಕೆ.ಎಂ.ಈಶ್ವರಿ, ಪ್ರಮುಖರಾದ ಪ್ರಕಾಶ್ ನಾಯ್ಕ, ಪಾಲಾಕ್ಷ, ಪಂಪಾಪತಿ, ಸಮೀರ್, ಅಭಿಷೇಕ್ ಕಾಳೆ, ಮಂಜುಳಾ, ಮಹೇಶ್ವರಿ, ಯಶೋದಮ್ಮ, ಮಾನಸಾ, ಹುಲಿಗೆಮ್ಮ, ಜ್ಯೋತಿ ಇತರರಿದ್ದರು.

Published on

ಹೊಸಪೇಟೆ: ಸಂಡೂರು ತಾಲೂಕಿನ ತೋರಣಗಲ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಎಐಡಿವೈಒ, ಎಐಎಮ್‌ಎಸ್‌ಎಸ್ ಹಾಗೂ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಎಐಎಂಎಸ್‌ಎಸ್ ಸಂಚಾಲಕಿ ಕೆ.ಈಶ್ವರಿ ಮಾತನಾಡಿ, ದೇಶದಲ್ಲಿ ಪ್ರತಿ 11 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿವೆ. ಆದರೂ, ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅತ್ಯಾಚಾರಕ್ಕೆ ಪ್ರೇರೆಪಿಸುತ್ತಿರುವ ಅಶ್ಲೀಲತೆ, ಮಾದಕ ವಸ್ತುಗಳನ್ನು ತಡೆಗಟ್ಟುವ ಬದಲಾಗಿ ಅದನ್ನೆ ಬಂಡವಾಳ ಮಾಡಿಕೊಂಡಿದೆ ಎಂದು ದೂರಲಾಯಿತು. ರು.

ಹಸುಳೆಯ ಮೇಲೆ ಅತ್ಯಾಚಾರ ನಡೆಸುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಅಪರಾಧಿಗೆ ತಕ್ಷಣವೇ ಶಿಕ್ಷೆಯಾಗಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ವರದಿ ಜಾರಿಗೊಳಿಸಿ. ಅಶ್ಲೀಲತೆ, ಮಾದಕ ವಸ್ತುಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net