

ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರದ ಕೃತ್ಯ ಖಂಡನೀಯ. ಅತ್ಯಾಚಾರಿಗೆ ಸಂವಿಧಾನದಡಿ ಇರುವ ಕಾನೂನಿನಲ್ಲಿ ಕಠಿಣ ಶಿಕ್ಷೆ ಕೊಡಬೇಕಿತ್ತು. ಅದು ಎನ್‌ಕೌಂಟರ್ ರೂಪದಲ್ಲಿ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಕ್ಕಳ ವಿಚಾರ ಬಂದಾಗ ಎಲ್ಲರೂ ಇಂತಹ ಕೆಲಸಗಳನ್ನ ಖಂಡಿಸಬೇಕು. ಕೇವಲ ಕಾನೂನು ಪಾಲಿಸುವುದು ಒಂದೇ ಅಲ್ಲ. ಸಾರ್ವಜನಿಕರು ಕೂಡ ತಮ್ಮ ಜವಾಬ್ದಾರಿ ಮೆರೆಯಬೇಕಿದೆ. ಹೊರ ರಾಜ್ಯಗಳಿಂದ ಇಲ್ಲಿ ಬಂದು ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರ ಸಂಪೂರ್ಣ ಹಿನ್ನೆಲೆಯನ್ನು ಹೊಂದುವುದು ಅಗತ್ಯ. ಅಂಕಿಅಂಶಗಳು ಬೇಕಾಗುತ್ತವೆ. ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಸಚಿವ ಸಂಪುಟದಲ್ಲೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.