

ಎನ್.ಆರ್.ಪುರ: ಅಕಾಲಿಕ ಮಳೆಯಿಂದಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹೆಚ್ಚಾಗಬಹುದು ಎಂಬ ಭೀತಿಯಿಂದ ನಗರದಲ್ಲಿ ಕ್ಷಿಪ್ರ ಲಾರ್ವ ಸಮೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ.ಆಕರ್ಷ ಹೇಳಿದರು.
ಶುಕ್ರವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕ್ಷಿಪ್ರ ಲಾರ್ವ ಸಮೀಕ್ಷಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಸರ್ಕಾರದ ಸೂಚನೆಯಂತೆ ಪಟ್ಟಣದ 11ವಾರ್ಡ್‌ಗಳ ಮನೆ, ಮನೆಗಳಲ್ಲಿ, ಶಾಲಾ ಕಾಲೇಜು, ಸರ್ಕಾರಿ ಕಚೇರಿ, ನೂತನ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಪ್ರತಿ ಮೊದಲ ಶುಕ್ರವಾರ ಹಾಗೂ 3ನೇ ಶುಕ್ರವಾರ ಲಾರ್ವ ಸಮೀಕ್ಷೆ ನಡೆಸಲಾಗುತ್ತದೆ. ಆರೋಗ್ಯ ಇಲಾಖೆ ಸೂಚನೆಯಂತೆ ಮಂಗಳವಾರ ಮತ್ತು ಶುಕ್ರವಾರ ನೀರು ಶೇಖರಣ ತಾಣಗಳನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ನೀರನ್ನು ತುಂಬಿಸಿ ಮುಚ್ಚಿಟ್ಟು ಬಳಸುವ ಮೂಲಕ ಒಣ ದಿನ ಆಚರಿಸಲಾಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕರಿಸಿ ಡೆಂೆ ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನಂತರ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ 11 ತಂಡಗಳಲ್ಲಿ 22 ಜನರು ಪಟ್ಟಣ ವಿವಿಧ ವಾರ್ಡ್‌ಗಳಿಗೆ ತೆರಳಿ ಡೆಂೆ ಕುರಿತು ಮಾಹಿತಿ ನೀಡಿ ಲಾರ್ವ ಕಂಡು ಬಂದ ತಾಣಗಳನ್ನು ಗುರುತಿಸಿ ಅದನ್ನು ನಾಶ ಪಡಿಸಲು ಟೆಮಿಪಾಸ್ ಎಂಬ ರಾಸಾಯನಿಕ ಸಿಂಪಡಿಸಿದರು. ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪಿ.ಪವನ್‌ಕರ್, ಹಿರಿಯ ಆರೋಗ್ಯ ನಿರೀಕ್ಷಕರಾದ ದರ್ಶನ್, ಕೇಶವ ಮೂರ್ತಿ, ನಾಗೇಂದ್ರಪ್ಪ, ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಡೈಸಿ,ಶೋಭಿ, ಆಶಾ ಕಾರ್ಯಕರ್ತೆಯರು ಇದ್ದರು.