ಶೀಘ್ರ ಕೋರ್ ಬ್ಯಾಂಕಿಂಗ್ ವ್ಯವ್ಥೆ

10NPN2-1.jpg
Published on

ನಿಪ್ಪಾಣಿ: ಮುಂದಿನ ವರ್ಷ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳಲಿರುವ ಶ್ರೀ ಶ್ರದ್ಧಾ  ಕ್ರೆಡಿಟ್ ಸೌಹಾರ್ದ ಸಹಕಾರಿಯು ಶೀಘ್ರದಲ್ಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ನಿಪ್ಪಾಣಿಯ ಶ್ರೀ ಶ್ರದ್ಧಾ  ಕ್ರೆಡಿಟ್ ಸೌಹಾರ್ದ ಸಹಕಾರಿ ವಾರ್ಷಿಕ ಸಭೆಯನ್ನು ಚಂದ್ರಕಾಂತ ತಾರಳೆ ಉದ್ಘಾಟಿಸಿದರು. ಸುರೇಶ ಕೋಠಿವಾಲೆ, ಚಂದ್ರಕಾಂತ ಕೋಠಿವಾಲೆ, ಶಿವಮೂರ್ತಿ ಸ್ವಾಮಿ, ಶಶಿಕಾಂತ ಕೋಠಿವಾಲೆ ಇತರರಿದ್ದರು.
ನಿಪ್ಪಾಣಿಯ ಶ್ರೀ ಶ್ರದ್ಧಾ  ಕ್ರೆಡಿಟ್ ಸೌಹಾರ್ದ ಸಹಕಾರಿ ವಾರ್ಷಿಕ ಸಭೆಯನ್ನು ಚಂದ್ರಕಾಂತ ತಾರಳೆ ಉದ್ಘಾಟಿಸಿದರು. ಸುರೇಶ ಕೋಠಿವಾಲೆ, ಚಂದ್ರಕಾಂತ ಕೋಠಿವಾಲೆ, ಶಿವಮೂರ್ತಿ ಸ್ವಾಮಿ, ಶಶಿಕಾಂತ ಕೋಠಿವಾಲೆ ಇತರರಿದ್ದರು.

ನಗರದ ಮಹಾದೇವ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಕಾರಿಯ 24ನೆಯ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. 2022-23ರ ಆರ್ಥಿಕ ವರ್ಷದಲ್ಲಿ 85 ಲಕ್ಷ ರೂ. ಲಾಭ ಗಳಿಸಿದ್ದು, ಶೇ.15 ಲಾಭಾಂಶ ವಿತರಿಸಲಾಗುವುದು. 61 ಕೋಟಿ ರೂ. ಸಂಗ್ರಹಿಸಲಾಗಿದ್ದು, 41 ಕೋಟಿ ರೂ. ಸಾಲ ವಿತರಿಸಲಾಗಿದೆ. 290 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ. 100 ಕೋಟಿ ರೂ. ಠೇವು ಸಂಗ್ರಹಿಸುವ ಗುರಿ ಹೊಂದಿದೆ ಎಂದರು.

ವಿಎಸ್‌ಎಂ ಗ್ರೂಪ್‌ನ ಸಿಇಒ ಡಾ.ಸಿದ್ಧಗೌಡ ಪಾಟೀಲ ಮಾತನಾಡಿ, ಆಡಳಿತ ಮಂಡಳಿ ಪಾರದರ್ಶಕ ಆಡಳಿತದಿಂದ ಅತ್ಯುತ್ತಮ ಸಹಕಾರಿ ಪ್ರಶಸ್ತಿಗೆ ಭಾಜನವಾಗಿತ್ತು. ಸಹಕಾರಿ ಬೆಳ್ಳಿ ಮಹೋತ್ಸವದಲ್ಲಿ 25 ಶಾಖೆ ಹೊಂದುವಂತಾಗಲಿ ಎಂದರು.

ಕುರ್ಲಿ ಶಾಖೆಯ ಅಧ್ಯಕ್ಷ ಸಂಜಯ ಶಿಂತ್ರೆ ಮಾತನಾಡಿದರು. ಸಂಚಾಲಕ ರಾವಸಾಹೇಬ ಪಾಟೀಲ ವಾರ್ಷಿಕ ವರದಿ ಓದಿದರು. ಹಿರಿಯ ಸದಸ್ಯ ಚಂದ್ರಕಾಂತ ತಾರಳೆ ಅಧ್ಯಕ್ಷತೆ ವಹಿಸಿದ್ದರು. ಸಿಇಒ ದಿನಕರ ಪವಾರ, ಉಪಾಧ್ಯಕ್ಷ ಶಿವಮೂರ್ತಿ ಸ್ವಾಮಿ, ಸುರೇಶ ಕೋಠಿವಾಲೆ, ಸಂಚಾಲಕರಾದ ಶಶಿಕಾಂತ, ಕೋಠಿವಾಲೆ, ಪಪ್ಪು ಪಾಟೀಲ, ಶ್ರೀರಾಮ ಭಾರಮಲ, ಚಿಕ್ಕೋಡಿ ಶಾಖೆಯ ವ್ಯವಸ್ಥಾಪಕಿ ರೂಪಾ ಧಾರವಾಡ, ದಯಾನಂದ ಕೋಠಿವಾಲೆ, ನರಸಗೊಂಡ ಪಾಟೀಲ, ರಾಜೇಶ ತಿಳವೆ, ಸಚಿನ ಹಾಲಪ್ಪನವರ, ಮಲ್ಲಪ್ಪ ರೂಗೆ, ಕಲ್ಲಪ್ಪ ಜನವಾಡೆ,
ಗುರು ಪಾಟೀಲ, ಎಂ.ಬಿ. ಪಾಟೀಲ, ಸಂಜೀವ ಹಿರೇಮಠ, ಹಣಮಂತ ಯಲಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net