ಅತ್ಯಾಚಾರ ಎಸಗಿದ ಡ್ಯಾನ್ಸ್ ಮಾಸ್ಟರ್ ಬಂಧನ

ald police
ಆಲ್ದೂರಿನಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿರುವುದು.
Published on

ಆಲ್ದೂರು: ಪಟ್ಟಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಡ್ಯಾನ್ಸ್ ಮಾಸ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯನ್ನು ಥಳಿಸಿದ ಆರೋಪದ ಮೇರೆಗೆ ಹಿಂದು ಸಂಘಟನೆ 8 ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಡ್ಯಾನ್ಸ್ ಕಲಿಕೆಗೆ ಹೋಗುತ್ತಿದ್ದ ಬಾಲಕಿ ಜತೆ ಅನ್ಯಧರ್ಮದ ಡ್ಯಾನ್ಸ್ ಮಾಸ್ಟರ್ ರುಮಾನ್ ಎಂಬಾತ ಪ್ರೀತಿ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹಿಂದು ಕಾರ್ಯಕರ್ತರು ಆತನಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಹಿಂದು ಕಾರ್ಯಕರ್ತರ ವಿರುದ್ಧ ರುಮಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಖಾಸಗಿ ಶಾಲೆಯಿಂದ ನನಗೆ ಬರಬೇಕಿದ್ದ ಹಣ ಕೊಡಿಸುತ್ತೇವೆ ಎಂದು ಹೇಳಿ ನನ್ನನ್ನು ಕಾರಿನಲ್ಲಿ ದೊಡ್ಡಮಾಗರವಳ್ಳಿ ಗ್ರಾಮದ ಕಡೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದರು. ನಂತರ ಆಲದಗುಡ್ಡೆ ಬಳಿ ಕರೆದುಕೊಂಡು ಹೋಗಿ ಮತ್ತೆ ಹಲ್ಲೆ ನಡೆಸಿದರು. ನನ್ನ ತಮ್ಮ, ತಾಯಿಯನ್ನೂ ಕರೆಸಿ ಅವರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾನೆ. ಈ ಸಂಬಂಧ ಮಧು, ಪ್ರಜ್ವಲ್, ಪರೀಕ್ಷಿತ್, ರಂಜಿತ್, ಸ್ವರೂಪ್, ಶಿವಕುಮಾರ್, ಆದರ್ಶ್, ಕಾರ್ತಿಕ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅತ್ಯಾಚಾರದ ಆರೋಪಿ ವಿರುದ್ಧ ಬಾಲಕಿ ತಂದೆ ದೂರು ನೀಡಿದ್ದು, ಅಪ್ರಾಪ್ತ ವಯಸ್ಸಿನ ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿಷಯವನ್ನು ಮನೆಯಲ್ಲಿ ತಿಳಿಸಿದರೆ ಅಶ್ಲೆಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net