ಅತ್ಯಾಚಾರಿ ಆರೋಪಿಗೆ ಗುಂಡೇಟು

Published on

ಸಂಡೂರು (ಬಳ್ಳಾರಿ): ಪಂಚನಾಮೆ ವೇಳೆ ಪೇದೆ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ ಆರೋಪಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ ಘಟನೆ ಗುರುವಾರ ನಡೆದಿದೆ. ವಿಜಯನಗರ ಜಿಲ್ಲೆಯ ಹಳ್ಳೇಬೀಡು ನಿವಾಸಿ ಮಂಜುನಾಥ (26) ಬಂಧಿತ.

ಇತ್ತೀಚೆಗೆ ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಬಿಹಾರ್ ಮೂಲದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ, ಆರೋಪಿಯನ್ನು ಬುಧವಾರ ಕೊಪ್ಪಳದ ಹುಲಿಗಿಯಲ್ಲಿ ಬಂಧಿಸಿ ತೋರಣಗಲ್‌ಗೆ ಕರೆತರಲಾಗಿತ್ತು. ಗುರುವಾರ ಬೆಳಗ್ಗೆ ಆತನನ್ನು ಘಟನಾ ಸ್ಥಳಕ್ಕೆ ಪಂಚನಾಮೆ ಮಾಡಲು ಕರೆದೊಯ್ಯಲಾಗಿತ್ತು. ಈ ವೇಳೆ ಪೇದೆ ರಘುಪತಿ ಮೇಲೆ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆರೋಪಿ ಮೊಣಕಾಲಿಗೆ ಪಿಎಸ್‌ಐ ಧಾಕೇಶ್ ಗುಂಡು ಹಾರಿಸಿ ಸೆರೆ ಹಿಡಿಯಬೇಕಾಯಿತು ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net