ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ

7Raibag1 photo-Web
ರಾಯಬಾಗ ಪಟ್ಟಣದಲ್ಲಿ ಬುಧವಾರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ನಾಮದೇವ ಕಾಂಬಳೆ, ಲೋಕೇಶ ಕಾಂಬಳೆ, ಶಶಿಕಾಂತ ಕಾಂಬಳೆ, ದಿಲೀಪ ಪಾಯಣ್ಣವರ, ಉತ್ತಮ ಕಾಂಬಳೆ, ಉದಯ ಕುಳ್ಳಲಿ, ಚೇತನ ಕಾಂಬಳೆ ಇದ್ದರು.
Published on

ರಾಯಬಾಗ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕಾಮುಕರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಯುವತಿ ಶವವನ್ನು ಕುಟುಂಬದವರಿಗೆ ನೀಡದೆ ಸಾಕ್ಷೃ ನಾಶ ಮಾಡುವ ಉದ್ದೇಶದಿಂದ ಪೊಲೀಸರು ರಾತ್ರೋರಾತ್ರಿ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತೆಯ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಗೃಹ ಬಂಧನದಲ್ಲಿಟ್ಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಂತ್ರಸ್ತೆಯ ಅಂತಿಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರ ಎಸಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ನಾಮದೇವ

ಕಾಂಬಳೆ, ಲೋಕೇಶ ಕಾಂಬಳೆ, ಶಶಿಕಾಂತ ಕಾಂಬಳೆ, ದಿಲೀಪ ಪಾಯಣ್ಣವರ, ಉತ್ತಮ ಕಾಂಬಳೆ, ಉದಯ ಕುಳ್ಳಲಿ, ಚೇತನ ಕಾಂಬಳೆ, ಪ್ರೇಮ ಕಾಂಬಳೆ, ರಾಜು ತಳವಾರ, ಚನ್ನಮ್ಮ ಗಡ್ಕರಿ, ಹಾಜಿ ಮುಲ್ಲಾ, ಬಬನ ಕುರಣೆ, ಡಿ.ಎಚ್.ಯಲ್ಲಟ್ಟಿ, ಗಣೇಶ ಕಾಂಬಳೆ, ಕಿರಣ ಕಾಂಬಳೆ, ತ್ಯಾಗರಾಜ ಕದಂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net