ಅಪ್ರಾಪ್ತೆಯ ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಆರೋಪಿ ಚಿಕ್ಕಪ್ಪ ಬಂಧನ

rape pic new
Published on

ಮೂಡುಬಿದಿರೆ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಸೋಮವಾರ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೆಂಕಮಿಜಾರು ಗ್ರಾಪಂ ಪರಿಸರದ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಆಕೆ ಸ್ನೇಹಿತೆ ಜತೆಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಮೂವತ್ತರ ಹರೆಯದ ಕುಮಾರ್ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ.

ಆಗ ಜತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿ ಹೋದಳು. ಈ ಸಂದರ್ಭ ಅತ್ಯಾಚಾರ ನಡೆದಿದೆ. ಮೂಡುಬಿದಿರೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net