ಪಕ್ಕದ ಮನೆಯವರ ಆಸ್ತಿ ಕಬಳಿಸಲು ಬಾಲಕಿ ಮೇಲೆ ಅತ್ಯಾಚಾರ !

Rape
Published on

ಬೆಂಗಳೂರು: ಪಕ್ಕದ ಮನೆಯವರ ಆಸ್ತಿ ಮೇಲೆ ಕಣ್ಣಿಟ್ಟ ಕಿಡಿಗೇಡಿಯೊಬ್ಬ ಆ ಮನೆಯ ಅಪ್ರಾಪ್ತ ಮಗಳನ್ನೇ ಕಿಡ್ನ್ಯಾಪ್​ ಮಾಡಿ ಅತ್ಯಾಚಾರವೆಸಗಿದ್ದಾನೆ.

ಆಸ್ತಿ ಆಸೆಗಾಗಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ದುಷ್ಕರ್ಮಿಗೆ 7 ವರ್ಷ ಕಠಿಣ ಸಜೆ ವಿಧಿಸಿ ಬೆಂ. ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ತಲಘಟ್ಟಪುರದಲ್ಲಿ ಚಿಂತಾಮಣಿ ಮೂಲದ ವೆಂಕಟೇಶ್​ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. 2012ರ ಜುಲೈ 31ರಂದು ಪಕ್ಕದ ಮನೆಯ 13 ವರ್ಷದ ಬಾಲಕಿ, ಊಟ ಮಾಡಿ ಕೈ ತೊಳೆಯಲು ಹೊರಬಂದಾಗ ಅಪಹರಣ ಮಾಡಿ ಚಿಂತಾಮಣಿಯಲ್ಲಿ ಕೂಡಿಟ್ಟಿದ್ದ. ಇದಕ್ಕೆ ಆತನ ಅಣ್ಣ ಮುನಿಕೃಷ್ಣ ಮತ್ತು ಮಾವ ವೆಂಕಟೇಶಪ್ಪ ಸಾಥ್​ ನೀಡಿದ್ದರು. ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದರೆ ಆಸ್ತಿ ಬರಲಿದೆ ಎಂದು ಪ್ರಚೋದನೆ ನೀಡಿದ್ದರು. ಇದನ್ನೂ ಓದಿರಿ ವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಠಾಣೆ ಪೊಲೀಸರು ತನಿಖೆ ಕೈಗೊಂಡು ಚಿಂತಾಮಣಿಯಲ್ಲಿ ಬಾಲಕಿಯನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವೆಂಕಟೇಶ್​ ನಾಯ್ಕ್​ ಅವರು, ವೆಂಕಟೇಶ್​ನನ್ನು ಅಪರಾಧಿ ಎಂದು ಘೋಷಿಸಿ 7 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ.

ಇದೇ ಪ್ರಕರಣದಲ್ಲಿ ಅಪರಾಧಿಯ ಅಣ್ಣ ಮುನಿಕೃಷ್ಣ ಮತ್ತು ಮಾವ ಡಿ.ಸಿ.ವೆಂಕಟೇಶಪ್ಪ ಅವರನ್ನು ಕೋರ್ಟ್​ ಖುಲಾಸೆಗೊಳಿಸಿದೆ. ಸಂತ್ರಸ್ಥೆಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದೆ. ಸರ್ಕಾರಿ ಅಭಿಯೋಜಕ ಎಸ್​.ವಿ.ಭಟ್​ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net