ಬಾಲಕಿಯ ಅತ್ಯಾಚಾರ, ಆರೋಪಿ ಬಂಧನ

raped
Published on

ಕೋಟ: ಕೋಟ ಬನ್ನಾಡಿ ಸಮೀಪದ ಹರೀಶ್ ಪೂಜಾರಿ ಎಂಬಾತ ಸಂಬಂಧಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾನೈಟ್ ಕೆಲಸ ಮಾಡಿಕೊಂಡಿದ್ದ ಆರೋಪಿ, ಬನ್ನಾಡಿ ಹರೀಶ್ ಪೂಜಾರಿ ಉಡುಪಿ ಮೂಲದ 9ನೇ ತರಗತಿ ಸಂತ್ರಸ್ತ ಬಾಲಕಿಯ ಸಂಬಂಧಿಯಾಗಿದ್ದು ಜುಲೈ 28ರಂದು ಉಡುಪಿಯಲ್ಲಿರುವ ಬಾಲಕಿಯ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಾಲಕಿಯ ಅತ್ಯಾಚಾರ ಎಸಗಿದ್ದಾನೆ. ದಿನದಿಂದ ದಿನಕ್ಕೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬಾಲಕಿಯನ್ನು ಪಾಲಕರು ವಿಚಾರಿಸಿದರು. ಆಗ ಬಾಲಕಿ ಗರ್ಭವತಿ ಎಂಬುದು ಬೆಳಕಿಗೆ ಬಂದಿದೆ. ಉಡುಪಿ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net