ಅತ್ಯಾಚಾರ-ಕೊಲೆಗೈದವರಿಗೆ ಕಠಿಣಶಿಕ್ಷೆ ವಿಧಿಸಿ

2-DVD-5
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಪ್ರಮುಖರಾದ ಹನುಮಂತಪ್ಪ ಕಾಕರಗಲ್, ಹನುಮಂತ ಮನ್ನಾಪುರ, ರಾಮಣ್ಣ ಕರಡಿಗುಡ್ಡ, ಬುರಪ್ಪ ಮರೆಡ್ಡಿ, ಬಸವರಾಜ, ಡೇವಿಡ್ ಮ್ಯಾತ್ರಿ ಇತರರಿದ್ದರು.
Published on

ದೇವದುರ್ಗ: ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಪಟ್ಟಣದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಖಂಡಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶನಿವಾರ ಪ್ರತಿಭಟನೆ ನಡೆಸಿತು.

ಗುರುಮಿಟ್ಕಲ್‌ನ ಇಂದಿರಾನಗರದಲ್ಲಿ ಅಲೆಮಾರಿ ಸಮಾಜದ ಚಿಂದಿ ಆಯುವ ಇಬ್ಬರು ಮಹಿಳೆಯರನ್ನು ಕಾಮುಕರು ಅಪಹರಣ ಮಾಡಿ ಅತ್ಯಾಚಾರ ನಡೆಸಿದ್ದಾರೆ. ನಂತರ ಕೊಲೆಮಾಡಿ ನೀಲಹಳ್ಳಿ ಕೆರೆಯಲ್ಲಿ ಎಸೆದಿದ್ದಾರೆ. ಸಮಾಜದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯ ಘಟನೆಗಳು ಪದೇಪದೆ ನಡೆಯುತ್ತಿರುವುದು ಖಂಡನೀಯ.

ಇಂಥ ಕೃತ್ಯಗಳಿಗೆ ಕಠಿಣಕ್ರಮ ಇಲ್ಲದೆ ಇರುವುದು ದುಷ್ಟರಿಗೆ ಭಯವಿಲ್ಲದಂತಾಗಿದೆ. ಉನ್ನತ ಮಟ್ಟದ ತನಿಖೆ ನಡೆಸಬೇಕು. ಆರೋಪಿಗಳಿಗೆ ಕಠಿಣಶಿಕ್ಷೆ ವಿಧಿಸಬೇಕು. ಅಲೆಮಾರಿ ಕುಟುಂಬಗಳಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಹನುಮಂತಪ್ಪ ಕಾಕರಗಲ್, ಹನುಮಂತ ಮನ್ನಾಪುರ, ರಾಮಣ್ಣ ಕರಡಿಗುಡ್ಡ, ಬುರಪ್ಪ ಮರೆಡ್ಡಿ, ಬಸವರಾಜ, ಡೇವಿಡ್ ಮ್ಯಾತ್ರಿ, ಲಕ್ಷ್ಮಣ ಭಂಡಾರಿ, ಆಂಜನೇಯ, ಶಿವರಾಜ ರುದ್ರಾಕ್ಷಿ, ವಿಶ್ವನಾಥ ಬಲ್ಲಿದವ್, ಮೋಹನ್ ಬಲ್ಲಿದವ್, ವೆಂಕನಗೌಡ ವಕೀಲ, ಕ್ರಾಂತಿಕುಮಾರ್ ರಾಯಚೂರಕರ್, ನರಸಪ್ಪ ಎನ್.ಗಣೇಕಲ್, ಶಾಮ್ ಖಾನಾಪುರ, ಯಲ್ಲಪ್ಪ ಮಂದಕಲ್, ಯಲ್ಲಪ್ಪ ವಿಭೂತಿ, ಮಾರೆಪ್ಪ ಹರವಿ, ವಸಂತ, ಯೇಸು ಕಮಲದಿನ್ನಿ, ರಂಗಪ್ಪ ನಾಯಕ ಬುಂಕಲದೊಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net