

ಮಂಗಳೂರು: ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದ ಪ್ರಕರಣ ವಿಚಾರಣೆ ನಡೆಸಿದ ದ.ಕ. ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಶ್ವತ್ಥ್ ಶಿಕ್ಷೆಗೊಳಗಾದವನು. ಈತ ತನ್ನ ಪತ್ನಿಯ ಮೊದಲ ಪತಿಯ ಮಗಳನ್ನು 2022ರ ಜುಲೈ 26ರಂದು ಅತ್ಯಾಚಾರಗೈದಿದ್ದ. ಪತ್ನಿ ಹೆರಿಗೆ ಹೋಗಿದ್ದ ವೇಳೆ ಅತ್ಯಾಚಾರಗೈದಿರುವ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾರಲ್ಲಾದರೂ ವಿಷಯ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬಾಲಕಿಯನ್ನು ಅಪರಾಧಿ ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅಶ್ವತ್ಥ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.