ಶಾಲಾ ವಾರ್ಷಿಕೋತ್ಸವಕ್ಕೆ ಬಂದ ಬಾಲಕಿಯನ್ನು ಮನೆಗೆ ಬಿಡುತ್ತೇನೆಂದು ಆತ ಕರೆದೊಯ್ದದ್ದಾರೂ ಎಲ್ಲಿಗೆ?

Published on

ಉಪ್ಪಿನಂಗಡಿ: ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದ 14ರ ಹರೆಯದ ಬಾಲಕಿಯನ್ನು ಮಧ್ಯರಾತ್ರಿ ಮನೆಗೆ ಬಿಡುವುದಾಗಿ ತಿಳಿಸಿ ನೆರೆಮನೆಯ ಯುವಕನೋರ್ವ ಬೈಕ್‌ನಲ್ಲಿ ಕೂರಿಸಿ ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿಗೆ ಕರೆದೊಯ್ದು ಅತ್ಯಾಚಾರವೆಸಗಿ ಕಾಡಿನಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.

ಆರೋಪಿ ಚೇತನ್ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಕೆಲದಿನಗಳ ಹಿಂದೆ ಬಾಲಕಿ ಹೆತ್ತವರು, ಅಜ್ಜ ಮತ್ತು ತಂಗಿಯ ಜತೆ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಿದ್ದಳು. ಕಾರ್ಯಕ್ರಮ ಪೂರ್ಣ ನೋಡಿ ಬರುವೆನೆಂದು ತಿಳಿಸಿದ ಕಾರಣ ಹೆತ್ತವರು ಮನೆಗೆ ತೆರಳಿದ್ದರು. ಆಕೆ ಮನೆ ಸಮೀಪದ ನಿವಾಸಿ ಚೇತನ್ ಎಂಬಾತ ಕಾರ್ಯಕ್ರಮ ಮುಗಿದ ಮನೆಗೆ ಕರೆದೊಯ್ಯುವೆನೆಂದು ನಂಬಿಸಿ ಆಕೆಯನ್ನು ಬೈಕಿನಲ್ಲಿ ಕುಳ್ಳಿರಿಸಿ ಗುಡ್ಡವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ಅಲ್ಲದೆ ಮಧ್ಯರಾತ್ರಿ ಆಕೆಯನ್ನು ಕಾಡಿನಲ್ಲೇ ಬಿಟ್ಟು ಹೋಗಿದ್ದನು. ಬೆಳಗಾಗುವ ತನಕ ಗುಡ್ಡದಲ್ಲೇ ಇದ್ದ ಬಾಲಕಿಯನ್ನು ಹೆತ್ತವರು ಹುಡುಕಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net