ಅತ್ಯಾಚಾರ ಪ್ರಕರಣ, ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ

188034-rapeweb-1
Published on

ಗದಗ: 13ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸೋದರ ಮಾವ ನಿರಂತರ ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಆರೋಪ ಸಾಭಿತಾದ ಹಿನ್ನೆಲೆ ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಲಕ್ಷ್ಮೆಶ್ವರ ತಾಲೂಕಿನ ಸಂತೆಶಿಗ್ಲಿ ಗ್ರಾಮದ ಯಲ್ಲಪ್ಪ ಕೊಂಚಿಕೊರವರ(40) ಶಿಕ್ಷೆಗೆ ಒಳಗಾದ ಅಪರಾಧಿ.


ಏನಿದು ಪ್ರಕರಣ?
ಬಾಲಕಿ ಕುಟುಂಬವು ಮೂಲತಃ ಕೂದಲು ಮಾರುವ ವ್ಯಾಪರಸ್ಥರಾಗಿದ್ದು, ಹುನಗುಮದ ತಾಳುಕಿನ ಅಮೀನಗಡದಲ್ಲಿ ತಂದೆ ಮತ್ತು ಅವರ ಕುಟುಂಬದವರು ತೀರಿಹೋಗಿರುತ್ತಾರೆ. ಈ ಪ್ರಕರಣದಿಂದ ನೊಂದ ತಾಯಿಯು ಮಗಳನೊಡನೆ ಸಂತೆಶಿಗ್ಲಿ ಗ್ರಾಮಕ್ಕೆ ಬಂದು ಜೋಪಡಿ ಹಾಕಿಕೊಂಡು ನೆಲೆಸುತ್ತಾರೆ. ತಾಯಿ ಕೂದಲು ಮಾರಲು ಹಳ್ಳಿಗಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಾಯಿಯ ತಮ್ಮನಾದ ಯಲ್ಲಪ್ಪನು ಬಾಲಕಿ ಮೇಲೆ ನಿರಂತರ ಅತ್ಯಾಚಾರ ಮಾಡಿ ಗರ್ಭವತಿ ಮಾಡುತ್ತಾನೆ. 13 ವರ್ಷದ ಬಾಲಕಿಯು ಒಂದು ಮಗುವಿಗೆ ಜನ್ಮ ನೀಡುತ್ತಾಳೆ. ತಂದನಂತರ ಬಾಲಕಿ ಮತ್ತು ಮಗು ತೀರಿ ಹೋಗುತ್ತಾರೆ. ಪ್ರಕರಣ ಬೆಳಕಿಗೆ ಬಂದು ಲಕ್ಷ್ಮೆಶ್ವರ ಪೊಲೀಸ್​ ಠಾಣೆಯಲ್ಲಿ (47/2020) ಐಪಿಸಿ 376/2/ಐ ಹಾಗೂ ಕಲಂ 4 ಮತ್ತು 6 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಮರೇಶ ಹಿರೇಮಠ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 25 ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ ಹಾಗೂ ದಂಡ ಪಾವತಿಸಲು ತಪ್ಪಿದ್ದಲ್ಲಿ 2 ವರ್ಷ ಹೆಚ್ಚುವರಿ ಶಿಕ್ಷೆ ನೀಡಿ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net