ಪೇದೆಯಿಂದಲೇ ಅತ್ಯಾಚಾರ? ಕೈಕೊಟ್ಟ ಪ್ರಿಯಕರನ ವಿರುದ್ಧ ಎಫ್​ಐಆರ್

Rape 18 April 20
Published on

ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ್ದಾನೆ ಎಂದು ಆರೋಪಿಸಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್​ ಕಾನ್​ಸ್ಟೇಬಲ್​ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿ ಸಾಯಬಣ್ಣ ವಿರುದ್ಧ ಅತ್ಯಾಚಾರ ಆರೋಪ ದೂರು ದಾಖಲಾಗಿದೆ. ಫೇಸ್​ಬುಕ್​ ಮೂಲಕ ಪರಿಚಯವಾದ ಸಾಯಬಣ್ಣ, ಮೇ 20ರಂದು ಮದುವೆ ಮಾತುಕತೆಗೆಂದು ಬೆಂಗಳೂರಿಗೆ ಬಂದಿದ್ದ. ಆ ದಿನ ಅಲ್ಲೇ ಉಳಿದು ಅತ್ಯಾಚಾರ ಎಸಗಿದ್ದಾನೆ. ಜೂನ್​ 12ರಂದು ಮಂಗಳೂರಿನ ಕ್ವಾಟ್ರಸ್​ಗೆ ಕರೆಸಿ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುವಂತೆ ಒತ್ತಾಯಿಸಿದಾಗ ಆತ ನಿರಾಕರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿರಿ ಪೊಲೀಸರ ದಾಳಿ ವೇಳೆ ಆ ಪುರುಷರ ಕೈಯಲ್ಲಿದ್ದ ಲೇಡಿಸ್​ ಪರ್ಸ್​ನ ರಹಸ್ಯ ಬಯಲಾಯ್ತು!

ಸಾಯಬಣ್ಣನ ಜತೆ ಸೇರಿ ಬೆಂಗಳೂರಿನ ರಮೇಶ್​ ಗೌಡ ಎಂಬಾತ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ನ್ಯಾಯಕ್ಕಾಗಿ ಸಂತ್ರಸ್ತೆ ಮಹಿಳಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net