ಮಗಳಿಗೇ ಮಗು ನೀಡಿದ ಪಾಪಿ ತಂದೆ: ಅಪ್ಪನ ದಿನದಂದೇ ಹೇಯ ಕೃತ್ಯ

rape
Published on

ವಿಜಯವಾಣಿ ಸುದ್ದಿಜಾಲ

ಕೊಪ್ಪಳ: ಇಂದು ವಿಶ್ವ ಅಪ್ಪಂದಿರ ದಿನ. ಮಕ್ಕಳೆಲ್ಲ ತಮ್ಮ ತಂದೆ ದೇವರಂತೆ ಎಂದೆಲ್ಲ ಬರೆದುಕೊಂಡು ಹರ್ಷ ಪಟ್ಟರೆ, ಇಲ್ಲೊಬ್ಬ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಮಗಳಿಗೇ ಮಗುವನ್ನು ನೀಡಿದ ಹೇಯ ಘಟನೆ ನಡೆದಿದೆ.

ತಾಲೂಕಿನ ಗ್ರಾಮವೊಂದರಲ್ಲಿ ಈ ನೀಚ ಕೃತ್ಯ ನಡೆದಿದೆ. ಯಂಕಪ್ಪ ಗೊಲ್ಲರ್ (45) ಎಂಬಾತನೇ ತನ್ನ 14 ವರ್ಷದ ಮಗಳ ಮೇಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಕಾಮುಕ. ಈತನಿಗೆ 6 ಹೆಣ್ಣು ಮಕ್ಕಳಿದ್ದು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯೇ ಹಿರಿಯವಳು.

ಓದುವ ವಯಸ್ಸಿನಲ್ಲಿ ಶಾಲೆ ಬಿಟ್ಟು ತಂದೆಯೊಂದಿಗೆ ನಿತ್ಯ ದನ ಕಾಯುವ ಕೆಲಸಕ್ಕೆ ಹೋಗುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಳು. ಇದೇ ಸಮಯದಲ್ಲಿ ಕುಡಿದ ಅಮಲಿನಲ್ಲಿರುತ್ತಿದ್ದ ಯಂಕಪ್ಪ ಮಗಳೆಂಬುದನ್ನೂ ಲೆಕ್ಕಿಸದೇ ಅತ್ಯಾಚಾರ ನಡೆಸಿದ್ದಾನೆ. ಯಾರಿಗೂ ತಿಳಿಸದಂತೆ ಬೆದರಿಸಿದ್ದಾನ್ದೆ. ಶನಿವಾರ ರಾತ್ರಿ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈವೇಳೆ ಬಾಲಕಿ ಗರ್ಭಿಣಿ ಎಂಬ ವಿಷಯ ತಾಯಿ ಅರಿವಿಗೆ ಬಂದಿದೆ. ಅಲ್ಲದೇ 8 ತಿಂಗಳಿಗೆ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ತಿಳಿದು ನೊಂದ ತಾಯಿ ತನಗೂ ಮತ್ತು ಹೆತ್ತ ಮಗಳಿಗೂ ಮೋಸ ಮಾಡಿ ನೀಚ ಕೃತ್ಯ ಎಸಗಿದ ಪತಿ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಕಾಮುಕ ತಂದೆಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net