ಶಾಲಾ ಬಾಲಕಿಯ ಅತ್ಯಾಚಾರ ಯತ್ನ ಆರೋಪಿ ಪತ್ತೆಗೆ ಪೊಲೀಸರ ಕಾರ್ಯಾಚರಣೆ

images (5)
Published on

ಮಂಗಳೂರು: ನಗರದ ಹೊರ ವಲಯದ ತಲಪಾಡಿ ಚೆಕ್ ಪೋಸ್ಟ್ ಕಡೆಯಿಂದ ತಂಗಿಯೊಂದಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಸ್ಕೂಟರ್ ಸವಾರನೋರ್ವ ಕೈಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬುಧವಾರ ನಡೆದಿದ್ದು ಸಿಸಿಟಿವಿ ಆಧಾರದಲ್ಲಿ ಪೊಲೀಸರು ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತಲಪಾಡಿ ಅಲಂಕಾರ ಗುಡ್ಡೆಯಿಂದ ಸಂತ್ರಸ್ತೆ 14 ವರ್ಷದ ಬಾಲಕಿ ತನ್ನ ತಂಗಿಯೊಂದಿಗೆ ಬೆಳಗ್ಗೆ ತಲಪಾಡಿ ಚೆಕ್ ಪೋಸ್ಟ್ ದಾರಿಯಾಗಿ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಲ್ಲಿ ಬಂದಿದ್ದ ಬರ್ಮುಡಾ ಧರಿಸಿದ ಯುಬಕನೊಬ್ಬ ಬಾಲಕಿಯ ಕೈಯನ್ನ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಕ್ಕ ತಂಗಿ ಜೊತೆಯಾಗಿ ಆರೋಪಿಯನ್ನ ತಲ್ಲಿದ್ದು, ಆಗಂತುಕನು ಅಲ್ಲಿಂದ ಸ್ಕೂಟರ್ ಸಮೇತ ಪರಾರಿಯಾಗಿದ್ದಾನೆ. ಘಟನೆಯಿಂದ ಹೆದರಿದ ಬಾಲಕಿ ಸ್ಥಳೀಯರಲ್ಲಿ ವಿಚಾರ ತಿಳಿಸಿದ್ದಾಳೆ. ರಸ್ತೆಯಲ್ಲಿದ್ದ ಸಿಸಿಟಿವಿ ಫೂಟೇಜಲ್ಲಿ ಆರೋಪಿ ಸ್ಕೂಟರಲ್ಲಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂದೀಪ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net