ಪುತ್ರಿಯ ಅತ್ಯಾಚಾರ, ತಂದೆ ಬಂಧನ

Rape-Web
Published on

ಮಂಗಳೂರು: ತಂದೆಯೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ.

ರಾಮಚಂದ್ರಪ್ಪ ಬಂಧಿತ ಆರೋಪಿ. 2015-16ರಲ್ಲಿ ಪುತ್ರಿ 5ನೇ ತರಗತಿಯಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಪ್ರಸ್ತುತ ಆಕೆ 10ನೇ ತರಗತಿ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದಾಗ ಪುತ್ರಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ.

ಇದರಿಂದಾಗಿ ಆಕೆ ದೈಹಿಕ ಮತ್ತು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾಳೆ. ಅತ್ಯಾಚಾರ ಸಮಯದಲ್ಲಿ ಆಕೆಗೆ ತಿಳಿವಳಿಕೆ ಇಲ್ಲದ ಕಾರಣ ವಿಳಂಬವಾಗಿ ದೂರು ನೀಡಲಾಗಿದೆ. ಆ ಬಳಿಕವೂ ಆಗಾಗ ಅತ್ಯಾಚಾರ ಮಾಡುತ್ತಿದ್ದು, ಅದನ್ನು ಹೇಳಿಕೊಳ್ಳಲಾಗದೆ ಮಾನಸಿಕವಾಗಿ ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಊರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net