

ಮಂಗಳೂರು : ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಶುಕ್ರವಾರ ಕರಾಳಿಯಾದ್ಯಂತ ಬಿಡುಗಡೆಯಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಡಾ.ದೇವದಾಸ್ ಕಾಪಿಕಾಡ್ ಮಾತನಾಡಿ ತುಳು ಭಾಷೆಯಲ್ಲಿ ಬರುವ ಎಲ್ಲ ಸಿನಿಮಾಗಳಿಗೂ ತುಳುವರು
ಪ್ರ್ರೋತ್ಸಾಹಿಸಬೇಕು. ತುಳುವರಿಗೆ ಒಂದು ಉತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಉದ್ದೇಶದಿಂದ ರಾಪಟ ಸಿನಿಮಾ ಮಾಡಿದ್ದೇವೆ ಎಂದರು.
ಶರ್ಮಿಳಾ ಕಾಪಿಕಾಡ್, ಚಿತ್ರ ನಿರ್ದೇಶಕ ಅರ್ಜುನ್ ಕಾಪಿಕಾಡ್, ಕಾರ್ಪೋರೇಟರ್ ಕಿರಣ್ ಕೋಡಿಕಲ್, ಚಿತ್ರ ವಿತರಕ ಸಚಿನ್ ಎ.ಎಸ್., ಉಪ್ಪಿನಂಗಡಿ, ಕೆಮರಾಮ್ಯಾನ್ ಸಚಿನ್ ಶೆಟ್ಟಿ, ಶನಿಲ್ ಗುರು, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ನಟ ಭೋಜರಾಜ್ ವಾಮಂಜೂರ್, ಅನೂಪ್ ಸಾಗರ್, ನಿರೀಕ್ಷಾ ಶೆಟ್ಟಿ, ಕಾವ್ಯ ಅರ್ಜುನ್ ಕಾಪಿಕಾಡ್, ದಿವ್ಯಾ ಸಚಿನ್ ಶೆಟ್ಟಿ, ಅನಿಲ್ರಾಜ್ ಉಪ್ಪಳ, ಯತೀಶ್ ಬೈಕಂಪಾಡಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಂತೋಷ್ ಸುವರ್ಣ, ಚಿತ್ರದ ನಿರ್ಮಾಪಕಿ ಆಶಿಕಾ ಸುವರ್ಣ, ದಿನೇಶ್ ಶೆಟ್ಟಿ, ಹರಿ, ಕಿಶೋರ್ ಕೊಟ್ಟಾರಿ, ಅಶ್ವಿಥ್ ಕೊಟ್ಟಾರಿ ಉಪಸ್ಥಿತರಿದ್ದರು. ಲಕ್ಷ್ಮೀಶ ಸುವರ್ಣ
ಕಾರ್ಯಕ್ರಮ ನಿರೂಪಿಸಿದರು
*ಹಾಸ್ಯ ದಿಗ್ಗಜರ ಸಮ್ಮಿಲನ!*
ರಾಪಟ ಸಿನಿಮಾದಲ್ಲಿ ಅನೂಪ್ ಸಾಗರ್ ನಾಯಕ ನಟನಾಗಿ ಹಾಗೂ ನಿರೀಕ್ಷ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರ ರಂಗದ ಹಾಸ್ಯ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ವಿಕೀಶಾ, ರವಿರಾಮ ಕುಂಜ , ರೂಪಶ್ರೀ ವರ್ಕಾಡಿ ಮುಂತಾದವರು ನಟಿಸಿದ್ದಾರೆ. ಯುಎಇ, ಬಹರೈನ್, ಮಸ್ಕತ್, ಕತಾರ್‌ನಲ್ಲಿ ರಾಪಟ ಸಿನಿಮಾದ ಪ್ರೀಮಿಯರ್ ಶೋ ನಡೆದಿದ್ದು, ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.