

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣಕ್ಕೆ ನ್ಯಾ.ನಾಗಮೋಹನ ದಾಸ ನೇತೃತ್ವ ಆಯೋಗ ನೀಡಿರುವ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಲು ಆಗ್ರಹಿಸಿ ಆ.15 ರಂದು ಉಸ್ತುವಾರಿ ಸಚಿವರಿಗೆ ೇರಾವ್ ಮಾಡಲಾಗುತ್ತದೆಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜಿ.ನರಸಿಂಹಲು ಮರ್ಚಟ್ಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರಿಂಕೋರ್ಟ್ ಆದೇಶದ ಮೇಲೆ ರಾಜ್ಯ ಸರ್ಕಾರ ನ್ಯಾ.ನಾಗಮೋಹನ ದಾಸ ಆಯೋಗ ರಚಿಸಿತ್ತು. ಆಯೋಗ ಆ.7 ರಂದು ಸಚಿವ ಸಂಪುಟದಲ್ಲಿ ಸ್ವೀಕರಿಸಿದೆ. ಬೆಂಗಳೂರಿನಲ್ಲಿ ಆ.11 ರಿಂದ ಅನಿರ್ದಿಷ್ಟ ಧರಣಿ ಪ್ರಾರಂಭವಾಗಿದೆ.
ಆ.16 ವರೆಗೆ ವಿಶೇಷ ಸಚಿವ ಸಂಪುಟ ಚರ್ಚಿಸುವದಾಗಿ ಸರ್ಕಾರ ಹೇಳಿದೆ.ಕೂಡಲೇ ಆಯೋಗ ವರದಿ ಜಾರಿಗೆ ಸರ್ಕಾರ ತೀರ್ಮಾನ ಪ್ರಕಟಿಸಬೇಕೆಂದು ಆಗ್ರಹಿಸಿ ಸಚಿವರಿಗೆ ೇರಾವ್ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಆಂಜಿನೇಯ್ಯ ಉಟ್ಟೂರು, ಆಂಜಿನೇಯ್ಯ , ಪ್ರಭುರಾಜ ಮರ್ಚಟ್ಹಾಳ, ತಾಯಪ್ಪ ಗಧಾರ, ಕೃಷ್ಣ ಹರಿಜನವಾಡ ಇದ್ದರು.