ಕನ್ನಡಕ್ಕೆ ಶ್ರೇಷ್ಠ ಕಾವ್ಯ ನೀಡಿದ ಮಹಾಕವಿ ರನ್ನ

Ranna, the great poet who gave great poetry to Kannada
Published on

ಮುಧೋಳ: ಪಂಪನ ಬಗ್ಗೆ ವಿಶೇಷ ಗೌರವ ಹೊಂದಿದ್ದ ಶಕ್ತಿಕವಿ ರನ್ನನಿಗೆ ಕನ್ನಡದ ಕಾವ್ಯ ಪ್ರಕಾರದಲ್ಲಿ ಶ್ರೇಷ್ಠ ಕಾವ್ಯ ಕೊಟ್ಟ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.

ಪಟ್ಟಣದ ರನ್ನ ಭವನದ ಅಜೀತ ಸೇನಾಚಾರ್ಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರನ್ನ ಕಾವ್ಯದರ್ಶನ ವಿಶೇಷ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರನ್ನನ ಸಾಹಿತ್ಯ ಸಿಂಹಾವಲೋಕನ ಮಾದರಿಯಲ್ಲಿ ಇದ್ದು ಈ ಮಾದರಿ ಬೇರೆ ಯಾವ ಕವಿಯೂ ಮೊದಲು ಬಳಸದೆ ಇರುವುದು ರನ್ನನ ಕಾವ್ಯಕ್ಕೆ ಮತ್ತಷ್ಟು ಶಕ್ತಿ ಕೊಟ್ಟಿದೆ. ಕಾದಂಬರಿಯಲ್ಲಿ ಕತೆ ಮುಕ್ತಾಯವಾಗುತ್ತದೆ. ಆದರೆ, ರನ್ನನ ಕಾವ್ಯದಲ್ಲಿ ಕಥೆಗಿಂತ ವರ್ಣಣೆ ಹಾಗೂ ವಿಶೇಷ ಸ್ವಗತದಿಂದ ಮೆರಗು ತಂದು ಕೊಡುತ್ತದೆ. ನಾವು ಇತನನ್ನು ಹತ್ತನೆಯ ಶತಮಾನದ ಕಥೆಗಾರ ಎಂದರೆ ಅತೀಶಯೋಕ್ತಿಯಲ್ಲ. ಯಾಕೆಂದರೆ ದುರ್ಯೋದನನ್ನು ನಾಯಕನಾಗಿ ಮಾಡಿ ಎಲ್ಲ ಪಾತ್ರಗಳಿಗೂ ಸ್ವತಂತ್ರ್ಯ ತಂದು ಕೊಟ್ಟು ಅತ್ತಿಮಬ್ಬೆಯನ್ನು ಚಿರಸ್ಥಾಯಿಯಾಗಿ ಉಳಿಯಲು ಪಣತೊಟ್ಟ ರನ್ನನ ಜನ್ಮಭೂಮಿ ಮುಧೋಳವನ್ನು ಚಿರಸ್ಥಾಯಿಯಾಗಿ ಉಳಿಯಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸಾಹಿತಿ, ವೈದ್ಯ ಡಾ.ಶಿವಾನಂದ ಕುಬಸದ ಮಾತನಾಡಿ, ರನ್ನನು (949-1020) ಹತ್ತನೆಯ ಶತಮಾನ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ. ಹಳಗನ್ನಡದ ಮಹತ್ವ್ವದ ಕವಿ. ಪಂಪನ ಕಿರಿಯ ಸಮಕಾಲೀನವ. ಶಕ್ತಿಕವಿ ಎಂದೇ ಖ್ಯಾತನಾಗಿದ್ದು, ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೆ ಕುವೆಂಪು ಅವರಿಂದ ಪಾತ್ರನಾಗಿದ್ದಾನೆ ಎಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವಿರೇಶ ಬಡಿಗೇರ ಮಾತನಾಡಿ, ರನ್ನನ ಕಾವ್ಯಕ್ಕೆ ಅದ್ಭುತವಾದ ಶಕ್ತಿ ಇದ್ದು, ಆ ಶಕ್ತಿಯನ್ನು ಬಳಸಿ ಬರೆದ ಕವಿಯ ಕಾವ್ಯಗಳನ್ನು ಇಂದಿಗೂ ವಿಮರ್ಶೆ ಮಾಡಲು ಸಾಹಸ ಪಡಬೇಕಾಗುತ್ತಿದೆ. ಈ ಕಾರಣಕ್ಕಾಗಿ ಈ ಮಣ್ಣಿನ ಶ್ರೇಷ್ಠಕವಿ. ಅವರ ಕಾವ್ಯಗಳು ಸರ್ವಕಾಲಕ್ಕೂ ಸತ್ಯ. ಆ ಸಾಹಿತ್ಯದ ಪ್ರಸಾರ, ಪ್ರಚಾರ ರನ್ನ ವೈಭವ ರನ್ನ ಪ್ರತಿಷ್ಠಾನ ಮಾಡುತ್ತಿದ್ದು, ಇದು ವರ್ಣಣೀಯವಾದುದು ಎಂದು ಹೇಳಿದರು.

ರನ್ನನ ಕಾವ್ಯಧಾರೆ ಕುರಿತು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಹಾಕವಿ ರನ್ನನ ಕಾಲದಲ್ಲಿ ಸೀವಾದಿ ನಿಲುವು ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ರನ್ನ ತನ್ನ ಕಾವ್ಯದಲ್ಲಿ ಅದ್ಭುತ ಶಕ್ತಿಯ ಮೂಲಕ ಹೊಸ ಪ್ರಕಾರದಲ್ಲಿ ಚಿತ್ರಿಸಿದ್ದು ಸೀವಾದಿ ನಿಲುವುಗಳಿಂದ ಅವುಗಳಿಗೆ ಮತ್ತಷ್ಟು ಮೆರುಗು ಬಂದಿದೆ ಎಂದು ಹೇಳಿದರು.

ರನ್ನನ ಗದಾಯುದ್ಧದಲ್ಲಿ ರನ್ನನ ಸ್ವಗತ ಕುರಿತು ಮಾತನಾಡಿದ ಬಾಗಲಕೋಟೆಯ ಸಾಹಿತಿ ಮೈನುದ್ದೀನ ರೇವಡಿಗಾರ ಮಾತನಾಡಿ, ಮಹಾಕವಿ ಪಂಪ ತನ್ನ ಕಾಲದ ಕವಿ ಸರಸ್ವತಿದೇವಿಯ ಭಂಡಾರಕ್ಕೆ ಕೀಲಿ ಹಾಕಿದೆ. ಆ ಸರಸ್ವತಿ ಭಂಡಾರವನ್ನು ಒಡೆದ ಕವಿ ಮಹಾಕವಿ ರನ್ನನಾನಗಿದ್ದಾನೆ. ರನ್ನನ ಕೃತಿಗಳುದ್ದು ವಿಶೇಷವಾದ ವರ್ಣಣೆ ಕಂಡು ಬರುತ್ತಿದ್ದು ರನ್ನನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಆತನ ಜಾಣತನದ ನುಡಿಗಳು ಕಂಡು ಬರುತ್ತವೆ ಎಂದು ಹೇಳಿದರು.

ರನ್ನ ಪ್ರತಿಷ್ಠಾನದ ಡಾ.ಕೆ.ಎಲ್.ಉದಪುಡಿ, ಡಾ.ಶಿವಾನಂದ ಕುಬಸದ, ಸುಲೋಚನಾ ಜವಳಗಿ, ಶಿವಕುಮಾರಸ್ವಾಮಿ ಸರಗಣಾಚಾರಿಮಠ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮಾದೇವ ಹೊಸಟ್ಟಿ, ಸಿದ್ದು ಕಾಳಗಿ ಆನಂದ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net