ಬಿಮ್ಸ್ ನ 16 ವಿದ್ಯಾರ್ಥಿಗಳಿಗೆ ರ‌್ಯಾಂಕ್

Published on

ಬಳ್ಳಾರಿ ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಕಳೆದ ತಿಂಗಳು ನಡೆಸಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್ ) 16 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ.

ಅಂಗರಚನಾಶಾಸ್ತ್ರ: ಎ.ಶ್ರುತಿ ಪುಷ್ಪನ್ ಪ್ರಥಮ, ಔಷಧಶಾಸ್ತ್ರದಲ್ಲಿ ಪಿ.ಕೆ.ರಾಕೇಶಕುಮಾರ ದ್ವಿತೀಯ, ಸಮುದಾಯ ಔಷಧ ವಿಭಾಗದಲ್ಲಿ ಕೇಶವ ಪೆರುಮಾಳ್ ತೃತೀಯ, ಆರ್.ಸಹಾನ ಒಂಬತ್ತನೇ , ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ಇಂಚರಾ, ನಯನಾ ನಾಲ್ಕನೇ , ವಿನುತಾ ವಿ ಐದನೇ, ಮೂಳೆ ಚಿಕಿತ್ಸೆ ಶಾಸ್ತ್ರದಲ್ಲಿ ಎಂ.ಡಿ.ಅಮೀರ್ ಹನೀಫ್ ಮಲೀಕ್ ಐದನೇ , ಅಭಿಶೇಖ್ ರೆಡ್ಡಿ, ವಿಕ್ರಮ್ ರಾಯ್ಕರ್ ಎಂಟನೇ , ತಮಿಳ್ ಸೆಲ್ವನ್ ಹತ್ತನೇ, ಅರಿವಳಿಕೆ ಶಾಸ್ತ್ರದಲ್ಲಿ ಸುಪ್ರೀತಾ ಸುರೇಶ ನಾಯಕ್ ಐದನೇ, ಭಾಗ್ಯಶ್ರೀ ಆರನೇ, ಇಎನ್‌ಟಿಯಲ್ಲಿ ಮಧುರಾ ಎಂಟನೇ, ರೋಗಶಾಸ್ತ್ರದಲ್ಲಿ ಹರ್ಷಿಣಿ ಎಂಟನೇ ಹಾಗೂ ನೇತ್ರಶಾಸ್ತ್ರದಲ್ಲಿ ಅನುಶಾ ಎಸ್ ಮಧ್ಯಾಲ್ 10ನೇ ರ‌್ಯಾಂಕ್ ಪಡೆದಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net