ರಂಜಿತಾ ವೆಂಕಟರಾಮು ಅವಿರೋಧವಾಗಿ ಆಯ್ಕೆ

21 SARAG 1 (1)
ಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ರಂಜಿತಾ ವೆಂಕಟರಾಮು ಅವರನ್ನು ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು.
Published on

ಸರಗೂರು: ತಾಲೂಕಿನ ಎಂ.ಸಿ. ತಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮೀಪುರ ರಂಜಿತಾ ವೆಂಕಟರಾಮು ಅವಿರೋಧವಾಗಿ ಆಯ್ಕೆಯಾದರು.

ಲಕ್ಷ್ಮೀಮಾದಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ರಂಜಿತಾ ವೆಂಕಟರಾಮು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಕಬಿನಿ ನೀರಾವರಿ ಇಲಾಖೆ ಅಧಿಕಾರಿ ಕೆ.ಉಷಾ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷೆ ರಂಜಿತಾ ವೆಂಕಟರಾಮು ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ಕುಮಾರ್, ಸದಸ್ಯರು ಅಂಬಿಕಾ, ಚಿಕ್ಕಕ್ಯಾತ, ಕೆಂಡನಾಯಕ, ರಾಜಕುಮಾರ್, ಪ್ರಕಾಶ್ ಚಂದ್ರ, ನಿಂಗಮ್ಮ, ಭಾಗ್ಯಮ್ಮ, ನಾಗಮ್ಮ, ರಮೇಶ್, ಮುಖಂಡ ಜಯಲಕ್ಷ್ಮೀಪುರ ರಾಜು, ನಾಗೇಂದ್ರ, ಭೋವಿ ಸಮಾಜದ ಯಜಮಾನರು ಸಿದ್ದರಾಜು, ನಾಗೇಶ್, ವೆಂಕಟಸ್ವಾಮಿ, ನಿಂಗಪ್ಪ, ನಾಗೇಂದ್ರ, ಭುವನೇಶ್, ಬರಗಿ ಮಹದೇವ, ರವಿ, ರೇವಣ್ಣ, ಬಸವಣ್ಣ, ಕೃಷ್ಣಭೋವಿ, ಸೋಮಣ್ಣ, ರಾಮಭೋವಿ, ಬರಗಿ ಚಂದ್ರ, ಮಲ್ಲಪ್ಪ, ಪ್ರತಾಪ್, ಸಕಲೇಶ್ ದೊಡ್ಡಭೋವಿ, ಲೋಕೇಶ್, ನಾಗರಾಜು, ನಿಜಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಮೇಶ್, ಗಜೇಂದ್ರ ಮತ್ತಿತರರು ಹಾಜರಿದ್ದರು.

ಅಧ್ಯಕ್ಷೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಂಚಾಯಿತಿ ಮುಂಬಾಗದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net