

ಬಂಟ್ವಾಳ: ಚರಿತ್ರೆಯೆಂದರೆ ಕೇವಲ ಮಂಚೂಣಿಯಲ್ಲಿರುವ ರಾಜ ಮಹಾರಾಜರ ಅಥವಾ ಜನನಾಯಕರ ಹೋರಾಟ ಮತ್ತು ಸಾಧನೆಗಳ ಘಟನಾವಳಿ ಎಂದು ಬಿಂಬಿತವಾಗಿದೆ. ವಿಶ್ವಾದ್ಯಂತ ಪ್ರಾದೇಶಿಕ ಮಟ್ಟದಲ್ಲಿ ನಡೆಸಿದ ಜನಸಾಮಾನ್ಯನ ಹೋರಾಟವಾಗಲಿ, ಸಾಧನೆಯಿರಲಿ ತೆರೆಮರೆಯಲ್ಲೇ ಉಳಿಯುವುದು ದುರಂತ ಎಂದು ಡಾ.ತುಕಾರಾಮ್ ಪೂಜಾರಿ ಹೇಳಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ ರಾಣಿಅಬ್ಬಕ್ಕ ಕಥಾಕೀರ್ಥನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ರೋಟರಿಕ್ಲಬ್ ಬಂಟ್ವಾಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಉದ್ಘಾಟಿಸಿದರು. ಬಂಟ್ವಾಳ ರೋಟರಿಕ್ಲಬ್ (ಟೌನ್) ಅಧ್ಯಕ್ಷ ಕಿಶೋರ್ ಕುಮಾರ್ ಹಾಗು ಕೇಂದ್ರದ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ನಿರೂಪಿಸಿದರು. ಕಲಾಸಾರಥಿತೋನ್ಸೆ ಪುಷ್ಕಲ್‌ಕುಮಾರ್ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಶ್ರೀಧರ್ ಭಟ್ ಮುಡಿಪು ಹಾರ್ಮೋನಿಯಮ್‌ನಲ್ಲಿ ಹಾಗೂ ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಿದರು.