ಹೋರಾಟದ ಸ್ಫೂರ್ತಿ ನಾಡಿನ ಕೀರ್ತಿ

KITTU RANI CHENNAMMA (2)
Published on
  1. ಕಲಬುರಗಿ: ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ರಾಣಿ ಚನ್ನಮ್ಮ ಸಾರ್ವಕಾಲಿಕ ಸ್ಫೂರ್ತಿಯಾಗಿದ್ದು, ಮಹಿಳೆಯರು ಚನ್ನಮ್ಮಳ ಜೀವನ, ಹೋರಾಟ, ಸಂಘಟನೆಯನ್ನು ಅರಿತು, ಸಾಗಬೇಕು ಎಂದು ಪ್ರೊ.ನೀಲಾಂಬಿಕಾ ಶೇರಿಕಾರ್ ಹೇಳಿದರು. ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಚನ್ನಮ್ಮ ಜಯಂತ್ಯುತ್ಸವ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿ,ಕಿತ್ತೂರು ಚನ್ನಮ್ಮ ನಿತ್ಯ ಲಿಂಗಪೂಜೆ ಮಾಡಿಕೊಳ್ಳುತ್ತಿದ್ದಳು. ಅಂಗೈಯಲ್ಲಿ ಲಿಂಗದಲ್ಲಿ ಇಡೀ ಪರಮಾತ್ಮನನ್ನು ಕಾಣುತ್ತಿದ್ದಳು. ಜೀವನದುದ್ದಕ್ಕೂ ವಿಭೂತಿ ಧರಿಸುವ ಮೂಲಕ ಮಾತೆ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ. ಕ್ಲಿಷ್ಟಕರ ಸಂದರ್ಭದಲ್ಲಿ ದತ್ತು ಪುತ್ರನೊಂದಿಗೆ ಅಧಿಕಾರ ನಡೆಸಿದ ಚನ್ನಮ್ಮ, ದುಷ್ಟ ಶಕ್ತಿಗಳು, ದೇಶ ವಿರೋಧಿಗಳು, ಸಮಾಜ ಭಕ್ಷಕರ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾಳೆ ಎಂದು ಹೇಳಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಜ್ಯೋತಿ ಮರಗೋಳ ಮಾತನಾಡಿ, ತಮ್ಮ ತ್ಯಾಗ ಬಲಿದಾನದ ಮೂಲಕ ಇಡೀ ಸಮುದಾಯಕ್ಕೆ ಚನ್ನಮ್ಮ ಪ್ರೇರಣೆಯಾಗಿದ್ದಾರೆ. ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಒಂದು ರಾಷ್ಟçವನ್ನೇ ಆಳಬಲ್ಲಳು, ಎಂತಹುದ್ದೆ ಸವಾಲು ಬಂದರೂ ಎದುರಿಸಬಲ್ಲಳು ಎಂಬುದಕ್ಕೆ ಚನ್ನಮ್ಮ ಸಾಕ್ಷಿ ಎಂದು ಹೇಳಿದರು. ಭಾಗವಹಿಸಿದ್ದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖರಾದ ವಿಲಾಸವತಿ ಖೂಬಾ, ಶಾಂತಾಬಾಯಿ ಎಂವೈ ಪಾಟೀಲ್, ಜಯಶ್ರೀ ದಂಡೆ, ಸುಮಾ ಪಪ್ಪಾ, ಜ್ಯೋತಿ ಇಂದಾಪುರ, ಲಕ್ಷ್ಮೀ ಡಿ ಪಾಟೀಲ್, ಜ್ಯೋತಿ ಪಾಟೀಲ್, ಮಾಲಾ ಕಣ್ಣಿ, ಶ್ರೀದೇವಿ ಸಾಸನಗೇರ, ವಿಜಯಲಕ್ಷ್ಮೀ ಪಾಟೀಲ್, ಬೇಬಿ ನಂದಾ, ಲತಾ ಬಿಲಗುಂದಿ, ಶಿಲಾ ಮುತ್ತಿನ್, ಜಾನವಿ ಪಪ್ಪಾ, ಅನ್ನಪೂರ್ಣ ಸಂಗಶೆಟ್ಟಿ, ಅನ್ನಪೂರ್ಣ ಹಿರೇಮಠ, ಶಿಲಾ ಕಲಬುರಗಿ, ಸಂಗೀತಾ ಕಂತಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಡಾ.ಅಲ್ಲಮಪ್ರಭು ದೇಶಮುಖ, ರವಿಂದ್ರ ಶಾಬಾದಿ, ಆರ್‌ಜಿ ಶೆಟಗಾರ್, ಸಂತೋಷ ಪಾಟೀಲ್ ಸರಡಗಿ, ರಾಜಶೇಖರ ಸಿರಿ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಕಲ್ಯಾಣಪ್ಪ ಮಳಖೇಡ, ಶರಣು ಪಪ್ಪಾ, ಅಶೋಕ ಇಂಡಿ, ಶಾಂತಕುಮಾರ ಪಾಟೀಲ್, ಭೀಮಾಶಂಕರ ಮೇಟೇಕರ, ಸೋಮಶೇಖರ ಹಿರೇಮಠ, ಎಂ.ಎಸ್.ಪಾಟೀಲ್ ನರಿಬೋಳ, ವಿಶ್ವನಾಥ ಪಾಟೀಲ್ ಗೌನಳ್ಳಿ, ಜಗನ್ನಾಥ ಪಾಟೀಲ್ ಯಳವಂತಗಿ, ನಾಗಲಿಂಗಯ್ಯ ಮಠಪತಿ, ರವಿ ನ್ಯಾಕ್ಸೊö್ಟÃ, ಉದಯ ಜೇವರ್ಗಿ, ರುದ್ರಮುನಿ ಮಠಪತಿ, ಅರವಿಂದ ಬಿರಾದಾರ ಇತರರಿದ್ದರು.

ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸರ್ದಾರ ಗುರುಸಿದ್ಧಪ್ಪ ಸೇರಿ ಸರ್ವ ಜನಾಂಗದವರ ನೆರವಿನಿಂದ ಸದೃಢ ಸಮಾಜ ಕಟ್ಟಿದ್ದ ಶ್ರೇಷ್ಠ ನಾಯಕಿ ರಾಣಿ ಚನ್ನಮ್ಮ. ಹುಬ್ಬಳ್ಳಿ ಮಾದರಿಯಲ್ಲಿ ಚನ್ನಮ್ಮ ಮೂರ್ತಿ ಸ್ಥಾಪಿಸಬೇಕು. | ಮಾಲಾ ಕಣ್ಣಿ, ಪ್ರಧಾನ ಕಾರ್ಯದರ್ಶಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ದೇಶದಲ್ಲೇ ಗಟ್ಟಿಯಾಗಿ ನಿಂತು ಬ್ರಿಟಿಷರ ವಿರುದ್ಧ ಹೋರಾಡಿದ್ದು ಕಿತ್ತೂರು ರಾಣಿ ಚನ್ನಮ್ಮ. ಅವರ ಮೂರ್ತಿಯನ್ನು ನಗರದ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸ್ಥಳಾವಕಾಶ ನೀಡಬೇಕು. ನಮಗೆಲ್ಲರಿಗೂ ಹೀರೋ ಆಗಿದ್ದು. ಅರ್ಥಪೂರ್ಣ ಜಯಂತ್ಯುತ್ಸವ ಆಚರಿಸಿದ್ದು, ನೃತ್ಯ, ನಾಟಕ ಮಾಡಿಸಿ ಚನ್ನಮ್ಮಳ ಜೀವನ ಚರಿತ್ರೆ ತಿಳಿಸುವ ಪ್ರಯತ್ನ ಮಾಡಲಾಗಿದೆ. | ಜ್ಯೋತಿ ಮರಗೋಳ, ಅಧ್ಯಕ್ಷೆ ಚನ್ನಮ್ಮ ಜಯಂತ್ಯುತ್ಸವ ಸಮಿತಿ

ಹರ ಹರ ಮಹಾದೇವ ಸ್ತ್ರೀ ಶಕ್ತಿಯ ಅನಾವರಣ ಹರ ಹರ ಮಹಾದೇವ ರಣಘೋಷ, ಕಿತ್ತೂರು ರಾಣಿ ಚನ್ನಮ್ಮಗೆ ಜೈಕಾರ ಮೊಳಗಿಸುವ ಜತೆಗೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿ ಚನ್ನಮ್ಮನ ಇಡೀ ಸಂಸ್ಥಾನವೇ ಮೆರವಣಿಗೆಯಲ್ಲಿ ಭಾಗವಹಿಸಿತ್ತು. ಎಲ್ಲ ಛದ್ಮವೇಷಧಾರಿಗಳ ಕುದುರೆ ಮೇಲೆ ಸವಾರಿ ಮಾಡಿ, ಸಾರೋಟಿನಲ್ಲಿ ಚನ್ನಮ್ಮಳ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ, ಹಲಗೆ ವಾದ್ಯ ಮೇಳದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಮೊದಲ ಬಾರಿಗೆ ಜಯಂತ್ಯುತ್ಸವ ಸಮಿತಿ ಮಾಡಿ, ಮಹಿಳಾ ಅಧ್ಯಕ್ಷೆಯಾಗಿದ್ದು, ಇಡೀ ಸಮಿತಿಯಲ್ಲಿ ಮಹಿಳೆಯರೇ ಇರುವುದು ವಿಶೇಷವಾಗಿತ್ತು. ಪ್ರಥಮ ಬಾರಿಗೆ ನಗರದಲ್ಲಿ ಚನ್ನಮ್ಮ ಜಯಂತಿ ಅತ್ಯಂತ ಅದ್ದೂರಿಯಾಗಿ ಗಮನ ಸೆಳೆಯಿತು. ಕಹಳೆ ಮೊಳಗಿಸಿದ ನಾಟಕ ವೀರಶೈವ ಮಹಾಸಭಾದಿಂದ ಹಮ್ಮಿಕೊಂಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಪ್ರದರ್ಶನವಾದ ವೀರರಾಣಿ ಕಿತ್ತೂರು ಚನ್ನಮ್ಮ ಕುರಿತು ಡಾ.ವಿಶ್ವರಾಜ ಪಾಟೀಲ್ ನಿರ್ದೇಶನದಲ್ಲಿ ವಿಶ್ವರಂಗ ಸಂಸ್ಥೆಯಿAದ ಪ್ರಸ್ತುತಪಡಿಸಿದ ನಾಟಕ ಇಡೀ ವೇದಿಕೆಯಲ್ಲಿ ಕಿತ್ತೂರಿನ ಹೋರಾಟದ ಕಹಳೆ ಮೊಳಗಿಸಿತು. ಬ್ರಿಟಿಷ ಅಧಿಕಾರಿ ಥ್ಯಾಕ್ರೆ ಮತ್ತು ಚನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣ ವೇಷಧಾರಿ ಮಕ್ಕಳ ಪ್ರದರ್ಶನಕ್ಕೆ ಕರಡಾತನದ ಮೆಚ್ಚುಗೆ ವ್ಯಕ್ತವಾಯಿತು. ಪ್ರಿಯಾ ನೃತ್ಯಕಲಾ ಸಂಸ್ಥೆಯಿAದ ಭರತ ನಾಟ್ಯ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net