

ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು
ಭಾರತ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಅಜರಾಮರವಾಗಲಿ ಎಂಬ ಉದ್ದೇಶದರಿಂದ ಬೆಳಗಾವಿ ಸ್ಥಾಪಿತವಾದ ವಿವಿಗೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಎಂದು ನಾಮಕರಣ ಮಾಡಲಾಗಿದೆ. ಆದರೆ, ಚನ್ನಮ್ಮ ರಾಜ್ಯಭಾರ ಮಾಡಿದ ಕಿತ್ತೂರು ಊರನ್ನು ಹೆಸರು ವಿವಿ ಹೆಸರಿನೊಂದಿಗೆ ಸೇರಿಸದೇ ಇರುವುದು ಚನ್ನಮ್ಮಳ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ದೇಶಕ್ಕಾಗಿ ಹೋರಾಡಿ ಮಡಿದವರ ಹೆಸರು ಚಿರಸ್ಥಾಯಿಯಾಗಲಿ ಎಂಬ ಉದ್ದೇಶದಿಂದ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರಸ್ತೆ, ಕಾಲನಿ, ವಿವಿಗಳಿಗೆ ಸೇರಿದಂತೆ ಇತರ ಪ್ರಮುಖ ಸ್ಥಳಗಳಿಗೆ ಅವರ ಹೆಸರುಗಳನ್ನು ಇಟ್ಟು ಸ್ಮರಣೆ ಮಾಡಲಾಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದು ಬ್ರಿಟಿಷ್ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿದ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಮುಂದಿನ ಪೀಳಿಗೆ ಬಾಯಲಿ ಉಳಿಯಲಿ ಎಂಬ ಸದುದ್ದೇಶದಿಂದ ಬೆಳಗಾವಿ ವಿವಿಗೆ ರಾಣಿ ಚನ್ನಮ್ಮ ಎಂದು ಹೆಸರು ಇಡಲಾಗಿದೆ. ಆದರೆ, ಇದು ಕಿತ್ತೂರು ನಾಡಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ರಾಣಿ ಚನ್ನಮ್ಮ ಎಂದು ಬಂದಾಗ ಅದರ ಮುಂದೆ ಕಿತ್ತೂರು ಬಂದರೆ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ ಮತ್ತು ರಾಣಿ ಚನ್ನಮ್ಮಳನ್ನು ಗೌರವಿಸಿದಂತಾಗುತ್ತದೆ ಎಂಬ ಆಗ್ರಹ ಕೇಳಿ ಬರುತ್ತದೆ. ಹೀಗಾಗಿ ವಿವಿಗೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಎಂದು ನಾಮಕರಣ ಮಾಡಬೇಕು ಎಂಬ ಒತ್ತಾಯ ಎಲ್ಲರದ್ದು.
ಮನವಿ ಕೊಟ್ಟರೂ ಪ್ರಯೋಜನವಿಲ್ಲ:ಸರ್ಕಾರ ಸೇರಿದಂತೆ ರಾಜಗುರು ಕಲ್ಮಠದ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ ಹಾಗೂ ಕಿತ್ತೂರು ಜನತೆ ಕಿತ್ತೂರು ಹೆಸರು ಸೇರಿಸಲು ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಏ.11ರಂದು ರಾಜ್ಯಪಾಲರ ಉಪಸ್ಥಿತಿಯಲ್ಲಿ ನಡೆದ 13ನೇ ಘಟಿಕೋತ್ಸವದ ವೇದಿಕೆ ಬ್ಯಾನರ್ ಗಳಲ್ಲಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಎಂದು ಮುದ್ರಣ ಮಾಡಲಾಗಿತ್ತು. ಇದನ್ನು ನೋಡಿದ ಕೆಲವರು ಕಿತ್ತೂರು ಹೆಸರು ಇರದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ:ಕಿತ್ತೂರು ರಾಣಿ ಚನ್ನಮ್ಮಳ ಹೆಸರನ್ನು ಈ ರೀತಿ ಅರೆಬರೆ ಬರೆದು ಅವಮಾನ ಮಾಡುವ ಬದಲು ಪೂರ್ಣ ಹೆಸರು ಬರೆದು ಕರ್ಮಭೂಮಿ ಹಾಗೂ ಚನ್ನಮ್ಮಳ ಹೆಸರನ್ನು ಪೂರ್ಣವಾಗಿ ಬರೆದು ಗೌರವ ಸಲ್ಲಿಸಬೇಕು. ಚನ್ನಮ್ಮಾಜಿ ಅಭಿಮಾನಿಗಳು ಹಾಗೂ ಕಿತ್ತೂರು ಜನತೆ ಬೀದಿಗಿಳಿದು ಹೋರಾಟ ಆರಂಭಿಸುವ ಮೊದಲು ವಿವಿ ಆಡಳಿತ ಮಂಡಳಿ, ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು.
ಈಗಾಗಲೇ ಕಿತ್ತೂರು ಹೆಸರು ಸೇರಿಸಲು ಮನವಿ ಮಾಡಲಾಗಿದೆ. ಇದು ದಶಕಗಳ ಬೇಡಿಕೆಯಾಗಿದೆ. ಕೂಡಲೇ ‘ಕಿತ್ತೂರು ’ಹೆಸರು ಸೇರಿಸುವಂತೆ ಸಂಬಂಧಪಟ್ಟವರಿಗೆ ಒತ್ತಾಯ ಮಾಡಿ ಹೆಸರು ಸೇರಿಸುತ್ತೇನೆ. ಬಾಬಾಸಾಹೇಬ ಪಾಟೀಲ, ಶಾಸಕ ಚನ್ನಮ್ಮನ ಕಿತ್ತೂರು ಈ ವಿಶ್ವವಿದ್ಯಾಲಯ ಸ್ಥಾಪನೆ ಆಗುವಾಗಲೇ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ಆಗಬೇಕಿತ್ತು. ಆದರೆ, ಯಾವ ಕಾರಣದಿಂದ ಕಿತ್ತೂರು ಹೆಸರು ಬಿಟ್ಟಿದ್ದಾರೆ ತಿಳಿದಿಲ್ಲ. ಆದರೆ, ಆ ತಪ್ಪು ಕೂಡಲೇ ‘ಕಿತ್ತೂರು’ ಹೆಸರು ಸೇರಿಸುವ ಮೂಲಕ ಸರಿಪಡಿಸುವುದು ಸೂಕ್ತ. ಬಸವರಾಜ ಕುಪ್ಪಸಗೌಡರ, ಕಿತ್ತೂರು ಅಭಿವದ್ಧಿ ಪ್ರಾಧಿಕಾರದ ಮಾಜಿ ಸದಸ್ಯ = ೆಟೋ: 12ಕಿತ್ತೂರು ಸ್ಟೋರಿ 01: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ. 12ಕಿತ್ತೂರು ಸ್ಟೋರಿ ಹೇಳಿಕೆ 01:ಬಾಬಾಸಾಹೇಬ ಪಾಟೀಲ, ಶಾಸಕ ಚನ್ನಮ್ಮನ ಕಿತ್ತೂರು 12ಕಿತ್ತೂರು ಸ್ಟೋರಿ ಹೇಳಿಕೆ 02: ಬಸವರಾಜ ಕುಪ್ಪಸಗೌಡರ, ಕಿತ್ತೂರು ಅಭಿವದ್ಧಿ ಪ್ರಾಕಾರದ ಮಾಜಿ ಸದಸ್ಯ