

ಬೆಳಗಾವಿ: ಕರ್ನಾಟಕ ಗ್ರಾಮೀಣ ಶಿಕ್ಷಣ ಟ್ರಸ್ಟಿನ ರಾಣಿ ಚನ್ನಮ್ಮ ಫಾರ್ಮಸಿ ಕಾಲೇಜ್ ಮತ್ತು ಆರ್‌ಎಂಎಲ್ ಫಾರ್ಮಸಿ ಕಾಲೇಜಿನ ವಾರ್ಷಿಕ ದಿನವನ್ನು ‘ಅಂತರಂಗ-2025’ ಶೀರ್ಷಿಕೆಯಡಿ ಗುರುವಾರ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ, ದಿವಂಗತ ಆರ್.ಎಸ್.ಮದರಖಂಡಿಯವರ ಪುತ್ಥಳಿ ಅನಾವರಣಗೊಳಿಸಲಾಯಿತು. ಡಾ.ಎಫ್.ವಿ.ಮಾನ್ವಿ ಮತ್ತು ಡಾ.ಎಂ.ಡಿ.ಕಾರ್ವೇಕರ ಔಷಧ ಕ್ಷೇತ್ರದಲ್ಲಿನ ನಾವೀನ್ಯತೆ, ಶಿಸ್ತು ಮತ್ತು ವೃತ್ತಿಪರ ಶ್ರೇಷ್ಠತೆಯ ಮಹತ್ವ ವಿವರಿಸಿದರು. ಪ್ರೊ.ಅಶೋಕ ಮದರಖಂಡಿ ಅಧ್ಯಕ್ಷತೆ ವಹಿಸಿದ್ದರು. 2024-25ರ ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಡಾ.ಎಸ್.ಜಿ.ವಸಂತರಾಜು ಮಂಡಿಸಿದರು. ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ ಮತ್ತು ನಾಟಕಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ರಶ್ಮಿ ಸುರ್ವೆ ಕಾರ್ಯಕ್ರಮ ನಿರ್ವಹಿಸಿದರು.