ರಾಣಿ ಚನ್ನಮ್ಮ ಜಯಂತ್ಯುತ್ಸವ 23ರಂದು

18-KND-01
Published on

ಕುಂದಗೋಳ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ವೀರ ರಾಣಿ ಕಿತ್ತೂರ ಚನ್ನಮ್ಮ ಜಯಂತಿಯ ಪೂರ್ವಬಾವಿ ಸಭೆ ಉದ್ದೇಶಿಸಿ ಮಾತನಾಡಿ ಅ. 23ರಂದು ತಾಲೂಕಾಡಳಿತದಿಂದ ಅದ್ದೂರಿಯಾಗಿ ವೀರ ರಾಣಿ ಚನ್ನಮ್ಮ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಉಪನ್ಯಾಸ ಸಹಿತ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಮುಖಂಡರಾದ ಅರವಿಂದ ಕಟಗಿ, ಎಸ್.ಜಿ. ಹಿರೇಗೌಡ್ರ, ನಾಗರಾಜ ದೇಶಪಾಂಡೆ, ಬಸವರಾಜ ನಾವಳ್ಳಿ, ಮಂಜುನಾಥ ಯಂಟ್ರೂವಿ, ರಮೇಶ ಕಮತದ, ಸಿದ್ದಪ್ಪ ಇಂಗಳಳ್ಳಿ, ರಾಮಣ್ಣ ಮುದೆಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net