ರಾಣಿ ಚನ್ನಮ್ಮ ಜಯಂತ್ಯುತ್ಸವ ಆಚರಣೆ

27-klg 2
Published on

ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮನ ಅಭಿಮಾನಿ ಬಳಗದ ವತಿಯಿಂದ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಬೆಳಗ್ಗೆ ಚನ್ನಮ್ಮ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಗ್ರಾಪಂ ಸದಸ್ಯ ರಮೇಶ ರೊಟ್ಟಿ, ವಿನಾಯಕ ಕುರಿ, ಬಸಲಿಂಗಪ್ಪ ದೇಸಾಯಿ, ಅಶೋಕ ಆಡಿನವರ, ನಿಜಲಿಂಗಪ್ಪ ಹುಲಮನಿ, ಮುದಕಪ್ಪ ಕುರಿ, ಈರಪ್ಪ ರಡ್ದೆರ, ಮಂಜುನಾಥ ಬಡಿಗೇರ, ಶಿವಪ್ಪ ಹುಲಮನಿ, ಮಲ್ಲಿಕಾರ್ಜುನ ಕುಂಕೂರ, ಈಶ್ವರ ಜಾಲಿಹಾಳ, ಶಿವಪುತ್ರಪ್ಪ ಆಲದಕಟ್ಟಿ, ರಾಮಣ್ಣ ತಂಬೂರ, ಮಹೇಶ ಮಿರ್ಜಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net