ರಂಗಸ್ನೇಹಿತ ಪ್ರಶಸ್ತಿ ಪ್ರದಾನ

26 Dwd 3 Malathi Bennur
Published on

ಧಾರವಾಡ: ನಗರದ ಸ್ನೇಹಿತರು ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಸಹಯೋಗದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ. ೨೭ರಂದು ಸಂಜೆ ೫.೩೦ ಗಂಟೆಗೆ ರಂಗಾಯಣದ ಬಯಲು ರಂಗಮAದಿರದಲ್ಲಿ ರಂಗಸ್ನೇಹಿತ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಸಲಾಗಿದೆ. ಬೆಂಗಳೂರಿನ ರಂಗಭೂಮಿ ಕಲಾವಿದೆ ಮಾಲತಿ ಬೆಣ್ಣೂರ ಅವರಿಗೆ ರಂಗಸ್ನೇಹಿತ' ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ರಾಘವ ಕಮ್ಮಾರ ಅವರಿಂದ ರಂಗಗೀತೆ ಪ್ರಸ್ತುತಿ, ಪವನ ದೇಶಪಾಂಡೆ ಅವರಿಂದಕೃಷ್ಣಂ ಒಂದೇ ಜಗದ್ಗುರುಂ', ಅಭಿಷೇಕ ಎಸ್.ಕೆ. ಅವರಿಂದ `ಕೊನೆಯ ಅಂಕ' ಏಕವ್ಯಕ್ತಿ ರಂಗಪ್ರಯೋಗ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net