ಸಕ್ಕರಿ ಬಾಳಾಚಾರ್ಯ ನೆನಪಿನ ರಂಗೋತ್ಸವ 27ರಿಂದ

23 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್​ ಸಹಯೋಗದಲ್ಲಿ ಕನ್ನಡದ ಆದ್ಯ ನಾಟಕಕಾರ ಶಾಂತಕವಿ ಸಕ್ಕರಿ ಬಾಳಾಚಾರ್ಯ ನೆನಪಿನ ರಂಗೋತ್ಸವ ಸಮಾರಂಭವನ್ನು ಆ. 27ರಿಂದ 29ರವರೆಗೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಮಹಾದೇವ ತಿಳಿಸಿದರು.
ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 27ರಂದು ಸಂಜೆ 6 ಗಂಟೆಗೆ ನಾಟಕಕಾರ ಡಾ. ಡಿ. ಎಸ್​.ಚೌಗಲೆ ಸಮಾರಂಭ ಉದ್ಘಾಟಿಸುವರು. ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ, ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್​ ಅಧ್ಯಕ್ಷ ಬಾಬುರಾವ ಸಕ್ಕರಿ, ನಿರ್ದೇಶಕ ಪ್ರಕಾಶ ಗರುಡ, ಕುಮಾರ ಬೆಕ್ಕೇರಿ ಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸುವರು. ನಂತರ ಶಾಂತಕವಿಗಳ ವಿಶ್ರಾಂತ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಆ. 28ರಂದು 6 ಗಂಟೆಗೆ ದೇವಸೂರ ನಾಟಕ ಪ್ರದರ್ಶನವಾಗಲಿದೆ. ಆ. 29ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಸಮಾರೋಪ ನುಡಿಗಳನ್ನಾಡುವರು. ಅತಿಥಿಗಳಾಗಿ ಕೆ.ಎಚ್​. ಚನ್ನೂರು, ಪ್ರಕಾಶ ಹೊಸಮನಿ ಆಗಮಿಸುವರು. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ನಂತರ ಹಬ್ಬದ ಹನ್ನೆಡನೆಯ ರಾತ್ರಿ ನಾಟಕ ಪ್ರದರ್ಶನವಾಗಲಿದೆ ಎಂದರು.
ಬಾಬುರಾವ್​ ಸಕ್ಕರಿ, ಹನುಮೇಶ ಸಕ್ಕರಿ, ಅರವಿಂದ ಕುಲಕರ್ಣಿ, ಸಮೀರ ಜೋಶಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net