

ಸವಣೂರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶಿಗ್ಗಾಂವಿ-ಸವಣೂರ ತಾಲೂಕು ವ್ಯಾಪ್ತಿಯ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆಯನ್ನು ಆ. 14ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ಫ್ರೀ ಹ್ಯಾಂಡ್, ಚುಕ್ಕಿ, ಮಂದನ, ಅಲ್ಫನ, ಅಲ್ಕೆಂ, ಕೋಲಮ್ ರಂಗೋಲಿ ಬಿಡಿಸಲು ಅವಕಾಶವಿದೆ. ಆ. 15ರಂದು ಬೆಳಗ್ಗೆ ಧ್ವಜಾರೋಹಣ ಸಮಾರಂಭದಲ್ಲಿ ಲಿತಾಂಶ ಘೋಷಣೆ ಹಾಗೂ ಬಹುಮಾನ ವಿತರಣೆ ಕೈಗೊಳ್ಳಲಾಗುವುದು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸೈನಿಕರನ್ನು ಸನ್ಮಾನಿಸಲಾಗುವುದು.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಲೇಜಿನ ಪ್ರಾಚಾರ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.